ವಿಶ್ವಕಪ್ ಮುಂದೂಡಲ್ಪಟ್ಟರೆ ಐಪಿಎಲ್‌ನಲ್ಲಿ ಸ್ಟೀವ್‌ ಸ್ಮಿತ್

Update: 2020-06-02 05:23 GMT

ಲಂಡನ್ : ಟ್ವೆಂಟಿ-20 ವಿಶ್ವಕಪ್ ಟೂರ್ನಿ ಮುಂದೂಡಲ್ಪಟ್ಟರೆ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಆಡಲು ಸಂತೋಷವಾಗುತ್ತದೆ ಎಂದು ರಾಜಸ್ಥಾನ ರಾಯಲ್ಸ್ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ.

ಅಕ್ಟೋಬರ್-ನವೆಂಬರ್‌ನಲ್ಲಿ ತಮ್ಮ ದೇಶದಲ್ಲಿ ನಿಗದಿಯಾಗಿದ್ದ ಟ್ವೆಂಟಿ-20 ವಿಶ್ವಕಪ್‌ನ್ನು ಮುಂದೂಡಿದರೆ ಐಪಿಎಲ್‌ನಲ್ಲಿ ಭಾಗವಹಿಸಲು ಸಿದ್ಧರಿರುವುದಾಗಿ ಸ್ಟೀವ್ ಸ್ಮಿತ್ ಸೋಮವಾರ ಅಭಿಪ್ರಾಯಪಟ್ಟರು.

ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟ ಐಪಿಎಲ್‌ನ್ನು ಬಿಸಿಸಿಐ ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ನಡೆಸುವ ಚಿಂತನೆ ನಡೆಸಿದೆ.

   ನಿಗದಿತ ಋತುವಿಗೆ ಮುಂಚಿತವಾಗಿ ರಾಜಸ್ಥಾನ ರಾಯಲ್ಸ್ ನಾಯಕನಾಗಿ ಆಯ್ಕೆಯಾದ ಸ್ಮಿತ್ ಅವರು ಆಸ್ಟ್ರೇಲಿಯ ಸರಕಾರ ಸುರಕ್ಷಿತವೆಂದು ಭಾವಿಸಿದರೆ ಐಪಿಎಲ್ ಪ್ರಯಾಣಿಸಲು ಮುಕ್ತನಾಗಿರುತ್ತೇನೆ ಎಂದು ಹೇಳಿದರು.

 ‘‘ನೀವು ವಿಶ್ವಕಪ್‌ನಲ್ಲಿ ನಿಮ್ಮ ದೇಶಕ್ಕಾಗಿ ಆಡುವುದು ಅದು ಪ್ರತಿಷ್ಠೆಯಾಗಿದೆ, ಆದ್ದರಿಂದ ನಾನು ಅದರಲ್ಲಿ ಆಡಲು ಬಯಸುತ್ತೇನೆ’’ಎಂದು ನ್ಯೂ ಸೌತ್‌ನೊಂದಿಗೆ ಸೋಮವಾರ ತರಬೇತಿಗೆ ಮರಳಿದ ನಂತರ ಸ್ಮಿತ್ ಹೇಳಿದರು.

ಕಳೆದ ವಾರ ಟ್ವೆಂಟಿ-20 ವಿಶ್ವಕಪ್‌ನ್ನು 2021 ಕ್ಕೆ ಮುಂದೂಡಬೇಕೆಂದು ಕ್ರಿಕೆಟ್ ಆಸ್ಟ್ರೇಲಿಯ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಪತ್ರ ಬರೆದಿದೆ ಎಂದು ವರದಿಯಾಗಿದೆ. ಐಸಿಸಿ ಜೂನ್ 10 ರಂದು ಟೂರ್ನಿಯ ಭವಿಷ್ಯವನ್ನು ನಿರ್ಧರಿಸುವ ನಿರೀಕ್ಷೆಯಿದೆ.

 ‘‘ನಾನು ವೈಯಕ್ತಿಕವಾಗಿ ಇದರ ಬಗ್ಗೆ ನಿಜವಾಗಿಯೂ ಯೋಚಿಸಿಲ್ಲ, ಇದು ವೃತ್ತಿಪರರು ಮತ್ತು ಸರಕಾರಗಳ ಸಲಹೆಯಿಂದ ಹೊರಗುಳಿಯುತ್ತದೆಂದು ನಾನು ಭಾವಿಸುತ್ತೇನೆ’’ ಎಂದರು. ಚೆಂಡಿನ ಮೇಲೆ ಜೊಲ್ಲು ರಸ ಸವರುವದನ್ನು ನಿಷೇಧಿಸುವಂತೆ ಐಸಿಸಿ ಕ್ರಿಕೆಟ್ ಸಮಿತಿಯು ಶಿಫಾರಸು ಮಾಡಿರುವ ಬಗ್ಗೆ ಕೇಳಿದಾಗ, ‘‘ಅದಕ್ಕೆ ಬದಲಿ ಯನ್ನು ಕಂಡು ಹಿಡಿಯುವುದು ಕಷ್ಟ ಎಂದು ಸ್ಮಿತ್ ಹೇಳಿದರು.

‘‘ನಾನು ಯಾವಾಗಲೂ ಬ್ಯಾಟ್ ಮತ್ತು ಚೆಂಡಿನ ನಡುವೆ ನ್ಯಾಯಯುತ ಸ್ಪರ್ಧೆಯನ್ನು ಬಯಸುತ್ತೇನೆ ಬ್ಯಾಟ್ಸಮನ್ ಆಗಿ ಸಹ ಅದು ಉತ್ತಮವೆಂದು ನಾನು ಭಾವಿಸುವುದಿಲ್ಲ. ಕೆಲವು ವಿಷಯಗಳೊಂದಿಗೆ ಅವರು ಇತರ ಮಾರ್ಗಗಳನ್ನು ಕಂಡುಕೊಳ್ಳಬಹುದೇ, ಅದು ಕಷ್ಟಕರವಾಗಿರುತ್ತದೆ.

ಕೊರೋನ ವೈರಸ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಐಪಿಎಲ್ ಮತ್ತು ಟ್ವೆಂಟಿ-20 ವಿಶ್ವಕಪ್ ಜೊತೆಗೆ ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ವೇಳಾಪಟ್ಟಿಯ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಇವೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News