‘ಮೇಲಿನಿಂದ ನೋಡುತ್ತಿರುವ ಜಾರ್ಜ್ ಫ್ಲಾಯ್ಡ್ ಗೆ ಇಂದು ದೊಡ್ಡ ದಿನ' ಎಂದು ಹೇಳಿ ವಿವಾದ ಸೃಷ್ಟಿಸಿದ ಟ್ರಂಪ್

Update: 2020-06-06 08:53 GMT

ವಾಷಿಂಗ್ಟನ್: ಕಳೆದ ವಾರ ಪೊಲೀಸ್ ಹಿಂಸೆಯಿಂದ ಮೃತಪಟ್ಟ ಜಾರ್ಜ್ ಫ್ಲಾಯ್ಡ್ ಪ್ರಕರಣ ಅಮೆರಿಕದಾದ್ಯಂತ ಪ್ರತಿಭಟನೆಗಳಿಗೆ ಕಾರಣವಾಗಿರುವಂತೆಯೇ ಶುಕ್ರವಾರ  ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಹೇಳಿಕೆಯೊಂದರಿಂದ ವಿವಾದಕ್ಕೀಡಾಗಿದ್ದಾರೆ.  “ಇಂದು ಜಾರ್ಜ್ ಫ್ಲಾಯ್ಡ್ ಗೆ ದೊಡ್ಡ ದಿನ'' ಎಂದು ಟ್ರಂಪ್ ಹೇಳಿರುವುದು ಭಾರೀ ಆಕ್ರೋಶ ಸೃಷ್ಟಿಸಿದೆ.

“ಕಳೆದ ವಾರ ಏನು ನಡೆಯಿತೆಂಬುದನ್ನು ನಾವೆಲ್ಲರೂ ನೋಡಿದ್ದೇವೆ. ಅಂತಹ ಘಟನೆ ಮತ್ತೆ ನಡೆಯಲು ನಾವು ಬಿಡಬಾರದು, ಜಾರ್ಜ್ ಈಗ ಕೆಳಕ್ಕೆ ನೋಡಿಕೊಂಡು ನಮ್ಮ ದೇಶಕ್ಕಾಗಿ ನಡೆಯುತ್ತಿರುವ ದೊಡ್ಡ ವಿಷಯವಿದು ಎಂದು ಹೇಳುತ್ತಿರಬಹುದು'' ಎಂದು  ಟ್ರಂಪ್ ಹೇಳಿರುವುದು ಹಲವರಲ್ಲಿ ಅಚ್ಚರಿ ಮೂಡಿಸಿದೆಯಲ್ಲದೆ, ಇದು ಫ್ಲಾಯ್ಡ್‍ಗೆ ದೊಡ್ಡ ದಿನವೆಂದು ಟ್ರಂಪ್ ಏಕೆ ಹೇಳಿದರೆಂದು ಹೆಚ್ಚಿನವರಿಗೆ ತಿಳಿದಿಲ್ಲ.

“ಸಮಾನತೆಯ ವಿಚಾರದಲ್ಲಿ ಇದೊಂದು ದೊಡ್ಡ ದೊಡ್ಡ ದಿನ'' ಎಂಡು ಟ್ರಂಪ್ ಹೇಳಿದರು.

ನಂತರ ದೇಶದ ಆರ್ಥಿಕತೆಯ ಬಗ್ಗೆ ಮಾತನಾಡಿ ‘ಅದು ರಾಕೆಟ್ ಮೋಡ್’ ನಲ್ಲಿದೆ ಎಂದು ಟ್ರಂಪ್ ಹೇಳಿದರು. ಈ ವಿಚಾರದ ಕುರಿತಂತೆಯೇ ಇಂದು ದೊಡ್ಡ ದಿನ ಎಂದು ಟ್ರಂಪ್ ಹೇಳಿರಬಹುದು ಎಂದು ಹಲವರು ಅಂದುಕೊಂಡಿದ್ದಾರೆ.

ಆದರೆ ಅಂತಹ ಅರ್ಥ ಕಲ್ಪಿಸುವ ಅಗತ್ಯವಿಲ್ಲ, ಅಧ್ಯಕ್ಷರು ಸಾಮಾಜಿಕ ಸಮಾನತೆ ಹಾಗೂ ಕಾನೂನಿನಡಿಯಲ್ಲಿ ಎಲ್ಲರೂ ಸಮಾನರು ಎಂಬರ್ಥದಲ್ಲಿ ಹೇಳಿದ್ದಾರೆ ಎಂದು ಶ್ವೇತಭವನದ ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News