×
Ad

ಜೂ.16: ಜಪ್ತಿ, ವಾರಸುದಾರರಿಲ್ಲದ ವಾಹನಗಳ ಹರಾಜು

Update: 2020-06-14 18:19 IST

ಬೆಂಗಳೂರು, ಜೂ.14: ಜಪ್ತಿ ಹಾಗೂ ವಾರಸುದಾರರಿಲ್ಲದ ವಾಹನಗಳ ಬಹಿರಂಗ ಹರಾಜು ಪ್ರಕ್ರಿಯೆ ಜೂ.16 ರಂದು ಇಲ್ಲಿನ ಆಡುಗೋಡಿ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯಲಿದೆ.

ಬೆಂಗಳೂರು ನಗರ ಸಂಚಾರ ಆಗ್ನೇಯ ಉಪವಿಭಾಗದ ಆಡುಗೋಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡಿರುವ 28 ದ್ವಿಚಕ್ರ ವಾಹನಗಳು ಮತ್ತು 2 ನಾಲ್ಕು ಚಕ್ರ ವಾಹನ ಸೇರಿ ಒಟ್ಟು 30 ವಾಹನಗಳಿಗೆ ವಾರಸುದಾರರು ಪತ್ತೆಯಾಗದ ಕಾರಣ ನ್ಯಾಯಾಲಯದ ಅನುಮತಿ ಪಡೆಯಲಾಗಿದ್ದು, ಜೂ.16ರ ಬೆಳಗ್ಗೆ 11 ಗಂಟೆಗೆ ಜಕ್ಕರಾಯನಕೆರೆ ಆವರಣದಲ್ಲಿ ಬಹಿರಂಗ ಸಾರ್ವಜನಿಕ ಹರಾಜು ಮಾಡಲಾಗುವುದು.

ಆಸಕ್ತ ಸಾರ್ವಜನಿಕರು ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು ಎಂದು ಆಡುಗೋಡಿ ಪೊಲೀಸ್ ಆರಕ್ಷಕ ನಿರೀಕ್ಷಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News