ಮುಕೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಸಾಲಮುಕ್ತ

Update: 2020-06-19 15:40 GMT

ಮುಂಬೈ: ತಮ್ಮ ರಿಲಯನ್ಸ್ ಇಂಡಸ್ಟ್ರೀಸ್ ನಿಗದಿತ ಅವಧಿಯಾದ ಮಾರ್ಚ್ 2021ರಿಗಿಂತ ಮುಂಚಿತವಾಗಿಯೇ ಸಾಲಮುಕ್ತವಾಗಿರುವ  ಹಿನ್ನೆಲೆಯಲ್ಲಿ ತಮ್ಮ ಸಂಸ್ಥೆ ‘ತನ್ನ ಸುವರ್ಣ ದಶಕದಲ್ಲಿದೆ' ಎಂದು ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಹೇಳಿಕೊಂಡಿದ್ದಾರೆ.

“ನಿಗದಿತ ಅವಧಿಯಾದ ಮಾರ್ಚ್ 2021ಕ್ಕಿಂತ ಮುಂಚಿತವಾಗಿಯೇ ರಿಲಯನ್ಸ್ ಸಾಲಮುಕ್ತವಾಗುವುದರೊಂದಿಗೆ ನಾನು ನನ್ನ ಷೇರುದಾರರಿಗೆ ನೀಡಿದ ಆಶ್ವಾಸನೆಯನ್ನು ಈಡೇರಿಸಿದ್ದೇನೆ'' ಎಂದು ಇಂದು ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ಮುಕೇಶ್ ಅಂಬಾನಿ ತಿಳಿಸಿದ್ದಾರೆ.

ಹೂಡಿಕೆಗಳ ಮುಖಾಂತರ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಎರಡು ತಿಂಗಳಿಗೂ ಕಡಿಮೆ ಅವಧಿಯಲ್ಲಿ- 58 ದಿನಗಳಲ್ಲಿ ಒಟ್ಟು  1,68,818 ಕೋಟಿ ರೂ. ಪಡೆದಿದೆ. ಜಾಗತಿಕ  ಹೂಡಿಕೆದಾರರಾದ ಫೇಸ್ ಬುಕ್, ಸಿಲ್ವರ್ ಲೇಕ್, ವಿಸ್ತಾ ಇಕ್ವಿಟಿ ಪಾಟ್ನರ್ಸ್,  ಜನರಲ್ ಅಟ್ಲಾಂಟಿಕ್, ಕೆಕೆಆರ್, ಎಡಿಐಎ, ಟಿಪಿಜಿ, ಎಲ್ ಕಟ್ಟರ್ಟನ್ ಹಾಗೂ ಪಿಐಎಫ್  ಇವುಗಳು ರಿಲಯನ್ಸ್ ಜಿಯೋ ಸಂಸ್ಥೆಯಲ್ಲಿ 1,15,693 ಕೋಟಿ ರೂ. ಹೂಡಿಕೆ ಮಾಡಿವೆ.  ಉಳಿದ ರೂ 53,124.20 ಕೋಟಿ ಮೊತ್ತ ರೈಟ್ಸ್ ಇಶ್ಯೂ ಮೂಲಕ ಪಡೆಯಲಾಗಿತ್ತು.

ರಿಲಯನ್ಸ್ ಸಂಸ್ಥೆಯ ಒಟ್ಟು ಸಾಲ ಮಾರ್ಚ್ 31, 2020ರಲ್ಲಿದ್ದಂತೆ ರೂ 1,61,035 ಕೋಟಿಯಾಗಿತ್ತು. ಆದುದರಿಂದ  ಹೂಡಿಕೆಗಳನ್ನು ಪಡೆದು ಇದೀಗ ಅದು ಸಾಲ ಮುಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News