ಸೌದಿ ಅರೇಬಿಯ: ಸೀಮಿತ ಮಟ್ಟದ ಹಜ್‌ಯಾತ್ರೆಯಲ್ಲಿ 65 ವರ್ಷಕ್ಕಿಂತ ಕೆಳಗಿನವರಿಗೆ ಮಾತ್ರ ಅವಕಾಶ

Update: 2020-06-24 17:21 GMT

ರಿಯಾದ್,ಜೂ.24: ಈ ವರ್ಷದ ಪವಿತ್ರ ಹಜ್‌ಯಾತ್ರೆಗೆ ಸೌದಿ ಆರೇಬಿಯದಲ್ಲಿ ವಾಸವಾಗಿರುವ, ಕೋವಿಡ್-19 ರೋಗಬಾಧಿತರಲ್ಲದ 65 ವರ್ಷಕ್ಕಿಂತ ಕೆಳಗಿನ ಪ್ರಾಯದವರಿಗೆ ಮಾತ್ರವೇ ಅವಕಾಶ ನೀಡಲಾಗುವುದೆಂದು ಸೌದಿ ಆರೇಬಿಯ ಪ್ರಕಟಿಸಿದೆ. ಹಜ್‌ಯಾತ್ರೆಯಲ್ಲಿ ಪಾಲ್ಗೊಳ್ಳುವ ಯಾತ್ರಿಕರ ಸಂಖ್ಯೆಯನ್ನು ಅದು 10 ಸಾವಿರಕ್ಕೆ ಸೀಮಿತಗೊಳಿಸಿದೆ.

ಹಜ್‌ಯಾತ್ರೆಗೆ ಪಾಲ್ಗೊಳ್ಳಲು ಅರ್ಜಿ ಸಲ್ಲಿಸುವ ಸೌದಿಯ ಆರೇಬಿಯದ ಪ್ರಜೆಗಳು ಹಾಗೂ ನಿವಾಸಿಗಳ ಪೈಕಿ ಅರ್ಹರನ್ನು ಆಯ್ಕೆ ಮಾಡಲು ಕಟ್ಟುನಿಟ್ಟಿನ ಮಾನದಂಡಗಳನ್ನು ಅನುಸರಿಸಲಾಗುವುದೆಂದು ಹಜ್ ಸಚಿವ ಮುಹಮ್ಮದ್ ಬಿಂತೆನ್ ತಿಳಿಸಿದ್ದಾರೆ.

  ಕೋವಿಡ್-19 ಹಾವಳಿಯ ಹಿನ್ನೆಲೆಯಲ್ಲಿ ಈ ವರ್ಷ  ಹಜ್‌ಯಾತ್ರೆಯನ್ನು ಸೀಮಿತಮಟ್ಟದಲ್ಲಿ ನಡೆಸಲಾಗುವುದೆಂದು ಸೌದಿ ಆರೇಬಿಯ ಸೋಮವಾರ ತಿಳಿಸಿತ್ತು. ಈ ಸಲ ವಿದೇಶಿ ಪ್ರಜೆಗಳಿಗೆ ಹಜ್‌ಯಾತ್ರೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದಿಲ್ಲ . ಆದರೆ ಹಜ್‌ಯಾತ್ರೆಗಾಗಿ ಈಗಾಗಲೇ ತಲುಪಿರುವವರಿಗೆ ಹಜ್‌ವಿಧಿಗಳನ್ನು ನಿರ್ವಹಿಸಲು ಅವಕಾಶ ನೀಡಲಾಗುವುದೆಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News