ವರ್ಗಾವಣೆ ಅಧಿಕಾರ ಸಚಿವರಿಗೆ: ನೌಕರರ ವಲಯದಲ್ಲಿ ಚರ್ಚೆಗೆ ಗ್ರಾಸ

Update: 2020-06-27 18:36 GMT

ಬೆಂಗಳೂರು, ಜೂ.27: ರಾಜ್ಯ ಸರಕಾರದಿಂದ ಗ್ರೂಪ್ ಬಿ ಹಾಗೂ ಸಿ ಸಮೂಹದ ಅಧಿಕಾರಿಗಳು ಮತ್ತು ಸಿಬ್ಬಂದಿಯ(ಜ್ಯೇಷ್ಠತಾ ಘಟಕದಲ್ಲಿ) ಒಟ್ಟು ವೃಂದ ಬಲದ ಶೇ.6ರಷ್ಟು ಸಿಬ್ಬಂದಿ ವರ್ಗಾವಣೆ ಮಾಡಲು ಅನುಮತಿ ನೀಡಲಾಗಿದೆಯಾದರೂ, ಈ ವರ್ಗಾವಣೆಯ ಅಧಿಕಾರವನ್ನು ಆಯಾ ಇಲಾಖೆಗಳ ಸಚಿವರಿಗೆ ನೀಡಿರುವುದು ನೌಕರರ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಈ ಸಾಲಿನಲ್ಲಿ ಸಾರ್ವತ್ರಿಕ ವರ್ಗಾವಣೆ ಮಾಡುವುದಿಲ್ಲ. ವಿರಳ ಪ್ರಕರಣಗಳಲ್ಲಿ ಮಾತ್ರ ಮುಖ್ಯಮಂತ್ರಿಯವರ ಅನುಮತಿ ಪಡೆದು ವರ್ಗಾವಣೆ ಮಾಡಲು ಅವಕಾಶ ನೀಡಲಾಗಿದೆ ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಆದೇಶ ಹೊರಡಿಸಿತ್ತು.

ಹೊಸ ಆದೇಶದಿಂದ ಅಧಿಕಾರಿಗಳು ಶಾಸಕರು, ಸಚಿವರ ಮೂಲಕ ನೌಕರರನ್ನು ತಮಗೆ ಬೇಕಾದ ಕಡೆಗೆ ವರ್ಗಾವಣೆ ಮಾಡಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ಪಾರದರ್ಶಕತೆ ಇರುವುದಿಲ್ಲ, ಭ್ರಷ್ಟಾಚಾರಕ್ಕೆ ದಾರಿ ಮಾಡಿಕೊಡಬಹುದು ಎಂಬ ಚರ್ಚೆಯೂ ಶುರುವಾಗಿದೆ.

ವರ್ಗಾವಣೆಗೆ ಸರಕಾರ ನಿಬರ್ಂಧ ವಿಧಿಸಿದ ಬಳಿಕ ವರ್ಗಾವಣೆಗೆ ಅವಕಾಶ ಕೊಡಬೇಕು ಎಂದು ನೌಕರರ ಸಮುದಾಯ ಕೂಡ ಸಚಿವರ ಮೇಲೆ ಒತ್ತಡ ಹಾಕಿತ್ತು. ವ್ಯಾಪಕವಾಗಿ ವರ್ಗಾವಣೆ ಮಾಡುವುದರ ಬದಲಿಗೆ ಸೀಮಿತವಾಗಿ ಅವಕಾಶ ಕಲ್ಪಿಸಲು ಪರಿಷ್ಕೃತ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News