ಬೆಂಗಳೂರು: ಪಾಪ್ಯುಲರ್ ಫ್ರಂಟ್ ನಿಂದ ಉಚಿತ ಬಿಎಸ್‍ಡಬ್ಲ್ಯೂ, ಎಂಎಸ್‍ಡಬ್ಲ್ಯೂ ಕೋರ್ಸ್ ಗೆ ಅರ್ಜಿ ಆಹ್ವಾನ

Update: 2020-07-05 10:17 GMT

ಬೆಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಡೆಸುತ್ತಿರುವ ಸರ್ವ ಶಿಕ್ಷಾ ಗ್ರಾಮ ಯೋಜನೆ ಅಡಿಯಲ್ಲಿ ಬಿಎಸ್‍ಡಬ್ಲ್ಯೂ ಮತ್ತು ಎಮ್‍ಎಸ್‍ಡಬ್ಲ್ಯೂ ಕೋರ್ಸ್ ಗಳಿಗೆ ಉಚಿತ ಪ್ರವೇಶಾತಿ ಪಡೆಯಲು ಸಾಮಾಜಿಕ ಕಾರ್ಯಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಅಭ್ಯರ್ಥಿಗಳು ಪಿಯುಸಿ ಅಥವಾ ಪದವಿ ತೇರ್ಗಡೆ ಹೊಂದಿರಬೇಕು. ಭಾರತದ ವಿವಿಧ ರಾಜ್ಯಗಳಲ್ಲಿ ಸೇವೆ ಸಲ್ಲಿಸಲು ಸಿದ್ಧರಿರುವ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಲಾಗುವುದು. ವ್ಯಾಸಂಗದ ಸಂದರ್ಭದಲ್ಲಿ ಊಟ ಮತ್ತು ವಸತಿ ಸೌಕರ್ಯವು ಸಂಪೂರ್ಣ ಉಚಿತವಾಗಿರುತ್ತದೆ. ಜೊತೆಗೆ ವಿದ್ಯಾರ್ಥಿಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆಕರ್ಷಕ ಮಾಸಿಕ  ಧನವನ್ನೂ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು pfi.cd.kar@gmail.com ಅಥವಾ ಡೆಕ್ಕನ್ ಹೌಸ್, ನಂ.5, ಫಸ್ಟ್ ಮೈನ್, 4ನೇ ಅಡ್ಡ ರಸ್ತೆ, ಎಸ್‍ಕೆ ಗಾರ್ಡನ್, ಬೆನ್ಸನ್ ಟೌನ್, ಬೆಂಗಳೂರು-46 ಈ ವಿಳಾಸಕ್ಕೆ ಜುಲೈ 20ರೊಳಗಾಗಿ ಕಳುಹಿಸಬೇಕು. ಹೆಚ್ಚಿನ ಮಾಹಿತಿಗಾಗಿ 7411022074 ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News