ಮಾಜಿ ಪ್ರೇಯಸಿಗೆ ಕಿರುಕುಳ ಆರೋಪ: ಯುವಕನ ವಿರುದ್ಧ ದೂರು

Update: 2020-07-05 12:29 GMT

ಬೆಂಗಳೂರು, ಜು.5: ಮಾಜಿ ಪ್ರೇಯಸಿಗೆ ಕಿರುಕುಳ ನೀಡುತ್ತಿರುವ ಆರೋಪದಡಿ ಯುವಕನೋರ್ವನ ವಿರುದ್ಧ ಇಲ್ಲಿನ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕುಂದಲಹಳ್ಳಿ ನಿವಾಸಿ 26 ವರ್ಷದ ಸಂತ್ರಸ್ತೆ ಚಿಕ್ಕಮಗಳೂರು ಮೂಲದ ಪೃಥ್ವಿ ಎಂಬಾತನನ್ನು ಕೆಲ ವರ್ಷಗಳ ಹಿಂದೆ ಪ್ರೀತಿ ಮಾಡುತ್ತಿದ್ದಳು. ಬಳಿಕ ಇಬ್ಬರ ನಡುವೆ ಗಲಾಟೆ ನಡೆದ ಕಾರಣಕ್ಕಾಗಿ ಯುವಕನನ್ನು ಆಕೆ ತೊರೆದಿದ್ದಳು ಎನ್ನಲಾಗಿದೆ.

ಬಳಿಕ ಸಂತ್ರಸ್ತೆ ಬೇರೊಬ್ಬರ ಜೊತೆ ಮದುವೆಯಾಗಲು ಸಿದ್ಧವಾಗಿದ್ದಳು. ಈ ವಿಷಯ ತಿಳಿದು ಕೋಪಗೊಂಡ ಆರೋಪಿ ಪೃಥ್ವಿ ಆಕೆಯ ಜೊತೆಗಿದ್ದ ಖಾಸಗಿ ಕ್ಷಣದ ಫೋಟೋ, ವಿಡಿಯೋಗಳನ್ನು ಮದುವೆಯಾಗುವ ವ್ಯಕ್ತಿಗೆ ಕಳುಹಿಸುವುದಾಗಿ ಕಿರುಕುಳ ನೀಡಿ ಮದುವೆ ನಿಲ್ಲಿಸಲು ಯತ್ನಿಸಿದ್ದ ಎನ್ನಲಾಗಿದೆ. ಇದರಿಂದ ನೊಂದ ಸಂತ್ರಸ್ತೆ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News