ಭಾರತದಲ್ಲಿ ಈತನಕ 1 ಕೋಟಿಗೂ ಅಧಿಕ ಕೊರೋನ ಸ್ಯಾಂಪಲ್ ಪರೀಕ್ಷೆ

Update: 2020-07-07 07:39 GMT

ಹೊಸದಿಲ್ಲಿ,ಜು.7: ಭಾರತದಲ್ಲಿ ಸೋಮವಾರದ ತನಕ 1 ಕೋಟಿಗೂ ಅಧಿಕ ನೊವೆಲ್ ಕೊರೋನ ವೈರಸ್ ಮಾದರಿಗಳನ್ನು ಪರೀಕ್ಷಿಸಲಾಗಿದೆ. ಇದೊಂದು ಪ್ರಮುಖ ಮೈಲುಗಲ್ಲು ಎನ್ನುವುದರಲ್ಲಿ ಅನುಮಾನವಿಲ್ಲ. ಆದರೆ, ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಟೆಸ್ಟಿಂಗ್ ಸಂಖ್ಯೆಯು ಈಗಲೂ ಅತ್ಯಂತ ಕಡಿಮೆಯಾಗಿದೆ.

ಭಾರತದ ದೊಡ್ಡ ಜನಸಂಖ್ಯೆಯನ್ನು ಪರಿಗಣಿಸಿದರೆ ಕೊರೋನ ಟೆಸ್ಟಿಂಗ್ ಸಾಕಷ್ಟು ಕಡಿಮೆಯಾಗಿದೆ. ಪ್ರತಿ ಮಿಲಿಯನ್ ಜನಸಂಖ್ಯೆಗೆ 7,400ಕ್ಕಿಂತ ಕಡಿಮೆ ಪರೀಕ್ಷೆಗಳು ನಡೆದಿವೆೆ.

ವರ್ಲ್ಡೊಮೀಟರ್ ವೆಬ್‌ಸೈಟ್‌ನಲ್ಲಿನ ಮಾಹಿತಿ ಪ್ರಕಾರ ಚೀನಾದಲ್ಲಿ ಸೋಂಕಿತರ ಸಂಖ್ಯೆ 85,000 ದಷ್ಟಿದೆ. ಆದರೆ 90 ದಶಲಕ್ಷಕ್ಕೂ ಅಧಿಕ ಕೊರೋನ ಪರೀಕ್ಷೆಗಳನ್ನು ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News