ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಮೃತದೇಹವನ್ನು ಆಸ್ಪತ್ರೆಯ ಹೊರಗಿಟ್ಟು ಹೋದ ಸಿಬ್ಬಂದಿ!

Update: 2020-07-07 08:55 GMT

ಭೋಪಾಲ್:  ಕೊರೋನ ಸೋಂಕಿತ ರೋಗಿಯ ಮೃತದೇಹವನ್ನು ಆಸ್ಪತ್ರೆಯ ಹೊರಭಾಗದಲ್ಲಿ ಬಿಟ್ಟುಹೋದ ಘಟನೆ ಭೋಪಾಲದಲ್ಲಿ ನಡೆದಿದೆ.

ಪಿಪಿಇ ಸೂಟ್ ಧರಿಸಿದವರು ಸ್ಟ್ರೆಚರ್ ನಲ್ಲಿ ಮೃತದೇಹವನ್ನು ತಂದು , ಮೃತದೇಹವನ್ನು ಆಸ್ಪತ್ರೆಯ ಹೊರಭಾಗದಲ್ಲಿ ಬಿಟ್ಟು ಸ್ಟೆಚರ್ ಮತ್ತು ಆ್ಯಂಬುಲೆನ್ಸ್ ನೊಂದಿಗೆ ಅಲ್ಲಿಂದ ತೆರಳುತ್ತಿರುವುದು  ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಕೆಲ ದಿನಗಳಿಂದ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು, ನ್ಯುಮೋನಿಯಾ ಆಗಿರಬಹುದು ಎಂದು ಶಂಕಿಸಲಾಗಿತ್ತು. ಸೋಮವಾರ ಬೆಳಗ್ಗೆ ಅವರಿಗೆ ಕೊರೋನ ಸೋಂಕು ತಗಲಿರುವುದು ದೃಢವಾಗಿತ್ತು.

ನಂತರ ಅವರನ್ನು ಭೋಪಾಲದ ಮತ್ತೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರನ್ನು ಪೀಪಲ್ಸ್ ಆಸ್ಪತ್ರೆಯಿಂದ ಚಿರಾಯು ಮೆಡಿಕಲ್ ಕಾಲೇಜಿಗೆ ಸಾಗಿಸುವಾಗ ಅವರು ಜೀವಂತವಾಗಿದ್ದರು ಎಂದು ಪುತ್ರ ಆರೋಪಿಸುತ್ತಾರೆ.

“ಆ್ಯಂಬುಲೆನ್ಸ್ ನೊಳಗೆ ಏನು ನಡೆಯಿತು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಈ ರೀತಿ ಅವರನ್ನು ರಸ್ತೆಯಲ್ಲಿ ಬಿಟ್ಟು ಹೋಗುವುದಾದರೆ ಚಿರಾಯು ಆಸ್ಪತ್ರೆಗೆ ಏಕೆ ಸಾಗಿಸಲಾಯಿತು?, ಎರಡೂ ಆಸ್ಪತ್ರೆಗಳದ್ದು ತಪ್ಪಿದೆ. ಈ ಬಗ್ಗೆ ಎರಡೂ ಆಸ್ಪತ್ರೆಗಳು ನಮಗೆ ಮಾಹಿತಿ ನೀಡಿಲ್ಲ” ಎಂದವರು ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News