ಕೋವಿಡ್ ನಿಯಂತ್ರಣ: ವಲಯ ಸಂಯೋಜಕರಾಗಿ 8 ಹಿರಿಯ ಐಎಎಸ್ ಅಧಿಕಾರಿಗಳನ್ನು ನೇಮಿಸಿದ ರಾಜ್ಯ ಸರಕಾರ

Update: 2020-07-09 11:49 GMT

ಬೆಂಗಳೂರು, ಜು. 9: ಬೆಂಗಳೂರು ನಗರದಲ್ಲಿ ಕೊರೋನ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸೋಂಕಿನ ಪರಿಣಾಮಕಾರಿ ನಿಯಂತ್ರಣ, ನಿರ್ವಹಣಾ ಕ್ರಮಗಳ ಮೇಲ್ವಿಚಾರಣೆಗೆ ಎಂಟು ಮಂದಿ ಹಿರಿಯ ಐಎಎಸ್ ಅಧಿಕಾರಿಗಳನ್ನು ವಲಯ ಸಂಯೋಜಕರನ್ನಾಗಿ ನೇಮಕ ಮಾಡಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಆದೇಶ ಹೊರಡಿಸಿದ್ದಾರೆ.

ತುಷಾರ್ ಗಿರಿನಾಥ್-ಬೆಂಗಳೂರು ಪೂರ್ವ, ರಾಜೇಂದ್ರ ಕುಮಾರ್ ಕಠಾರಿಯಾ-ಬೆಂಗಳೂರು ಪಶ್ಚಿಮ, ಕ್ಯಾಪ್ಟನ್ ಪಿ.ಮಣಿವಣ್ಣನ್-ಬೊಮ್ಮನಹಳ್ಳಿ, ನವೀನ್ ರಾಜ್ ಸಿಂಗ್-ಯಲಹಂಕ, ಮುನೀಷ್ ಮೌದ್ಗಿಲ್-ಬೆಂಗಳೂರು ದಕ್ಷಿಣ, ಡಾ.ಎನ್.ಮಂಜುಳಾ- ಮಹದೇವಪುರ, ಡಾ.ಪಿ.ಸಿ.ಜಾಫರ್-ದಾಸರಹಳ್ಳಿ, ಡಾ.ಆರ್.ವಿಶಾಲ್-ರಾಜರಾಜೇಶ್ವರಿನಗರ ವಲಯದ ಸಂಯೋಜಕರನ್ನಾಗಿ ನೇಮಕ ಮಾಡಲಾಗಿದೆ.

ಮೇಲ್ಕಂಡ ವಲಯಗಳ ಸಂಯೋಜಕರು, ಬಿಬಿಎಂಪಿ ಆಯುಕ್ತರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಬೇಕು. ವಲಯ ಸಂಯೋಜಕರು ಕೋವಿಡ್-19 ಸೋಂಕಿನ ನಿರ್ವಹಣಾ ಕ್ರಮಗಳ ಪುನರ್ ಪರಿಶೀಲನೆ ಮತ್ತು ಮೇಲ್ವಿಚಾರಣೆ ನಡೆಸುವುದು. ಬಿಬಿಎಂಪಿ ಜಂಟಿ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿ ಮತ್ತು ಸರಕಾರದ ಸಿಬ್ಬಂದಿ ವಲಯ ಸಂಯೋಜಕರಿಗೆ ಅಗತ್ಯ ನೆರವು ನೀಡಬೇಕು ಎಂದು ವಿಜಯಭಾಸ್ಕರ್ ಆದೇಶದಲ್ಲಿ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News