ಇಸ್ತಾಂಬುಲ್ ನ ವಿಶ್ವಪ್ರಸಿದ್ಧ ‘ಹಯಾ ಸೋಫಿಯಾ’ ಮಸೀದಿಯಾಗಿ ಮುಂದುವರಿಕೆ: ಟರ್ಕಿ ನ್ಯಾಯಾಲಯದ ಮಹತ್ವದ ತೀರ್ಪು

Update: 2020-07-10 16:25 GMT

ಅಂಕಾರ: ಸದ್ಯ ಮ್ಯೂಸಿಯಂ ಆಗಿರುವ, ಈ ಹಿಂದೆ ಕ್ರಿಶ್ಚಿಯನ್ ಕೆಥೆಡ್ರಾಲ್ ಆಗಿ ನಂತರ ಮಸೀದಿಯಾಗಿದ್ದ ಇಸ್ತಾಂಬುಲ್ ನ ಪ್ರಸಿದ್ಧ 'ಹಯಾ ಸೋಫಿಯಾ' ಇನ್ನು ಮುಂದೆ ಮಸೀದಿ ಎಂದು ಟರ್ಕಿಯ ಅತ್ಯುನ್ನತ ಕೋರ್ಟ್ ಆದೇಶ ನೀಡಿದೆ.

ಧಾರ್ಮಿಕ ಗುಂಪೊಂದು ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಿದ ಕೋರ್ಟ್ 6ನೆ ಶತಮಾನದ ಕಟ್ಟಡವನ್ನು ಮ್ಯೂಸಿಯಂ ಆಗಿ ಪರಿವರ್ತಿಸುವ 1934ರ ಸಂಸತ್ತಿನ ನಿರ್ಧಾರವನ್ನು ರದ್ದುಗೊಳಿಸಿತು. ಈ ಹಿಂದೆ ಇದ್ದಂತೆ ಹಯಾ ಸೋಫಿಯಾವನ್ನು ಮಸೀದಿಯಾಗಿ ಬದಲಾಯಿಸಲು ಸರಕಾರಕ್ಕೆ ನ್ಯಾಯಾಲಯ ಅವಕಾಶ ನೀಡಿದೆ.

ತೀವ್ರ ಅಂತಾರಾಷ್ಟ್ರೀಯ ವಿರೋಧದ ನಡುವೆ ಟರ್ಕಿ ಅಧ್ಯಕ್ಷ ರಿಸೆಪ್ ತಯ್ಯಿಪ್ ಎರ್ದೊಗಾನ್ ಈ ವಿಶ್ವಪ್ರಸಿದ್ಧ ಕಟ್ಟಡವನ್ನು ಮಸೀದಿಯಾಗಿ ಮುಂದುವರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕ್ರಮದ ವಿರುದ್ಧ ಅಮೆರಿಕ ಮತ್ತು ಸಂಪ್ರದಾಯವಾದಿ ಕ್ರೈಸ್ತ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News