ಕೋವಿಡ್-19: ಕೆಲಸ ಕಳೆದುಕೊಂಡ ಏಶ್ಯದ ಲಕ್ಷಾಂತರ ಜವಳಿ ನೌಕರರು: ವಾಲ್ ಸ್ಟ್ರೀಟ್ ಜರ್ನಲ್ ವರದಿ

Update: 2020-07-12 16:45 GMT

ವಾಶಿಂಗ್ಟನ್, ಜು. 12: ಕೊರೋನ ವೈರಸ್ ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಯಲು ವಿಧಿಸಲಾಗಿರುವ ಲಾಕ್ಡೌನ್ ಅವಧಿಯಲ್ಲಿ ಏಶ್ಯದ ಜವಳಿ ಉದ್ಯಮದ ಲಕ್ಷಾಂತರ ನೌಕರರು ಕೆಲಸ ಕಳೆದುಕೊಂಡಿದ್ದಾರೆ ಹಾಗೂ ಈ ಪೈಕಿ ಹೆಚ್ಚಿನ ಸಂಖ್ಯೆಯಲ್ಲಿರುವವರು ಮಹಿಳೆಯರು ಎಂದು ಅಮೆರಿಕದ ವಾಲ್ ಸ್ಟ್ರೀಟ್ ಜರ್ನಲ್ ಪತ್ರಿಕೆ ವರದಿ ಮಾಡಿದೆ.

ಏಶ್ಯದ ವಿವಿಧ ಅಭಿವೃದ್ಧಿಶೀಲ ದೇಶಗಳಿಗೆ ಸೇರಿದ ಲಕ್ಷಾಂತರ ಜನರು ಟಿ-ಶರ್ಟ್ ಗಳು, ಪ್ಯಾಂಟ್ ಗಳು ಹಾಗೂ ಇತರ ಬಟ್ಟೆಗಳನ್ನು ತಯಾರಿಸುವ ಕಾರ್ಖಾನೆಗಳನ್ನು ಉದ್ಯೋಗಕ್ಕಾಗಿ ಆಶ್ರಯಿಸಿದ್ದಾರೆ. ಆದರೆ, ಕೊರೋನ ವೈರಸ್ ಸಾಂಕ್ರಾಮಿಕದಿಂದಾಗಿ ಪಾಶ್ಚಿಮಾತ್ಯ ದೇಶಗಳ ಬಟ್ಟೆ ಕಂಪೆನಿಗಳು ಬಿಲಿಯಗಟ್ಟಳೆ ಡಾಲರ್ ಮೌಲ್ಯದ ಬೇಡಿಕೆಗಳನ್ನು ರದ್ದುಗೊಳಿಸಿದವು. ಹಾಗಾಗಿ, ಫ್ನೋಮ್ ಪೆನ್, ಢಾಕಾ ಮತ್ತು ಯಾಂಗನ್ ಮುಂತಾದ ನಗರದ ಸಮೀಪದ ಕೈಗಾಗಿಕಾ ವಸಾಹತುಗಳಲ್ಲಿರುವ ನೂರಾರು ಕಾರ್ಖಾನೆಗಳು ಮುಚ್ಚಿದವು ಎಂದು ಪತ್ರಿಕೆ ಹೇಳಿದೆ.

ಏಶ್ಯದಲ್ಲಿ ಬಾಂಗ್ಲಾದೇಶ, ವಿಯೆಟ್ನಾಮ್ ಮತ್ತು ಮ್ಯಾನ್ಮಾರ್ ದೇಶಗಳು ಇತ್ತೀಚಿನ ತಿಂಗಳುಗಳಲ್ಲಿ ಅತಿ ಹೆಚ್ಚಿನ ದುಷ್ಪರಿಣಾಮಕ್ಕೆ ಒಳಗಾದ ದೇಶಗಳಾಗಿವೆ. ಆ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಮ್ಮ ಹಳ್ಳಿಗಳಿಗ ಮರಳಿದ್ದಾರೆ. ಕೆಲಸವಿಲ್ಲದ ಹಿನ್ನೆಲೆಯಲ್ಲಿ ಹಣವಿಲ್ಲದೆ ಅವರು ಈಗ ಆಹಾರ ಸೇವನೆ ಪ್ರಮಾಣವನ್ನು ಕಡಿಮೆ ಮಾಡಿದ್ದಾರೆ ಹಾಗೂ ಬದಕುಳಿಯುವುದಕ್ಕಾಗಿ ಸಾಲ ಮಾಡುತ್ತಿದ್ದಾರೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News