ಬೆಂಗಳೂರು ಲಾಕ್‍ಡೌನ್: ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ

Update: 2020-07-13 12:10 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜು.13: ಇಂದಿನಿಂದ ಬೆಂಗಳೂರು ಸಂಪೂರ್ಣ ಸ್ತಬ್ಧವಾಗುತ್ತಿರುವ ಹಿನ್ನೆಲೆ ನಗರದ ಬಹುತೇಕ ರಸ್ತೆಗಳಲ್ಲಿ ವಾಹನಗಳು ಸಾಲು ಸಾಲಾಗಿ ನಿಂತಿದ್ದ ದೃಶ್ಯಗಳು ಸಾಮಾನ್ಯವಾಗಿತ್ತು.

ಇಲ್ಲಿನ ಕೆಂಪೇಗೌಡ ಬಸ್ ನಿಲ್ದಾಣ ರಸ್ತೆ, ಚಿಕ್ಕಪೇಟೆ, ಸ್ಯಾಟಲೈಟ್, ಯಶವಂತಪುರ, ಪೀಣ್ಯ, ಆರ್‍ಎಂಸಿ ಯಾರ್ಡ್, ಲಾಲ್‍ಬಾಗ್ ಹೀಗೆ ಬಹುತೇಕ ಕಡೆ ಸಂಚಾರ ದಟ್ಟಣೆ ಹೆಚ್ಚಾಗಿತ್ತು. ಅಲ್ಲದೆ ಟೋಲ್ ಗೇಟ್‍ಗಳಲ್ಲಿ ವಾಹನಗಳು ಮೈಲಿಗಟ್ಟಲೆ ಸಾಲಾಗಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಹಲವು ದಿನಗಳಿಂದ ನಗರದಲ್ಲಿ ಕೊರೋನ ಭೀತಿ ಹಿನ್ನೆಲೆ ಸಂಚಾರ ಕಡಿಮೆಯಿದ್ದು, ಹೆಚ್ಚಾಗಿ ಸಂಚಾರ ದಟ್ಟಣೆ ಕಾಣಿಸಿಕೊಂಡಿರಲಿಲ್ಲ. ಆದರೆ, ಬೆಂಗಳೂರು ವ್ಯಾಪ್ತಿಯಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮಂಗಳವಾರದಿಂದ ನಗರ ಸಂಪೂರ್ಣವಾಗಿ ಸ್ತಬ್ಧವಾಗಲಿದೆ. ಹೀಗಾಗಿ, ಅನೇಕರು ನಗರ ಬಿಟ್ಟು ಗ್ರಾಮಗಳ ಕಡೆ ಮುಖ ಮಾಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News