ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ-ದಕ್ಷಿಣ ಕನ್ನಡ ಜಂಟಿ ಪ್ರಥಮ

Update: 2020-07-14 15:14 GMT

ಬೆಂಗಳೂರು, ಜು.14: ದ್ವಿತೀಯು ಪಿಯು ಫಲಿತಾಂಶ ಪ್ರಕಟಗೊಂಡಿದ್ದು, ಉಡುಪಿ-ದಕ್ಷಿಣ ಕನ್ನಡ ಜಿಲ್ಲೆಗಳು ಶೇ.90.71 ಪ್ರಥಮ ಸ್ಥಾನ ಪಡೆದಿವೆ. ಕೊಡಗು ಶೇ.81.53 ದ್ವಿತೀಯ ಸ್ಥಾನ ಪಡೆದಿದ್ದು, ಒಟ್ಟಾರೆ ಈ ಬಾರಿ ಶೇ.61.80 ರಷ್ಟು ಫಲಿತಾಂಶ ದಾಖಲಾಗಿದೆ.

ದ್ವಿತೀಯ ಪಿಯು ಪರೀಕ್ಷೆ ಬರೆದ ಒಟ್ಟು 6,75,277 ವಿದ್ಯಾರ್ಥಿಗಳಲ್ಲಿ 4,17,297 ಮಂದಿ ಉತ್ತೀರ್ಣರಾಗಿದ್ದು, ಕಲಾ ವಿಭಾಗದಲ್ಲಿ 82,077(ಶೇ.41.27), ವಾಣಿಜ್ಯ 1,70,426(ಶೇ.65.52) ಹಾಗೂ ವಿಜ್ಞಾನ ವಿಭಾಗದಲ್ಲಿ 1,64,794(ಶೇ.76.2) ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ ಬಾಲಕಿಯರು ಶೇ.68.73 ಹಾಗೂ ಬಾಲಕರು ಶೇ.54.77ರಷ್ಟು ಉತ್ತೀರ್ಣರಾಗಿದ್ದಾರೆ.

ಮಾಧ್ಯಮವಾರು ಫಲಿತಾಂಶವನ್ನು ನೋಡುವುದಾದರೆ ಕನ್ನಡ ಮಾಧ್ಯಮದಲ್ಲಿ ಬರೆದ 2,88,998 ವಿದ್ಯಾರ್ಥಿಗಳ ಪೈಕಿ 1,37,454 ಮಂದಿ ಉತ್ತೀರ್ಣರಾಗಿದ್ದು, ಕೇವಲ ಶೇ.47.57 ಫಲಿತಾಂಶ ಸಿಕ್ಕಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಬರೆದ 3,86,279 ವಿದ್ಯಾರ್ಥಿಗಳಲ್ಲಿ ಶೇ.72.45 ಮಂದಿ ಉತ್ತೀರ್ಣರಾಗಿದ್ದಾರೆ. ಕನ್ನಡ ಮಾಧ್ಯಮದಲ್ಲಿ ಬರೆದ ಶೇ.52ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನುತ್ತೀರ್ಣಗೊಂಡಿರುವುದು ಆತಂಕದ ಬೆಳವಣಿಗೆಯಾಗಿದೆ. 

ನಗರದ ಪ್ರದೇಶದಲ್ಲಿ ಶೇ.62.60ರಷ್ಟು ಫಲಿತಾಂಶ ಬಂದಿದ್ದು, ಕಳೆದ ಸಾಲಿಗಿಂತ ಶೇ.1.22ರಷ್ಟು ಏರಿಕೆಯಾಗಿದೆ. ಆದರೆ, ಗ್ರಾಮಾಂತರ ಪ್ರದೇಶದಲ್ಲಿ ಈ ಬಾರಿ ಶೇ.58.99 ಫಲಿತಾಂಶ ಬಂದಿದ್ದು, ಶೇ.3.89 ರಷ್ಟು ಕಡಿಮೆಯಾಗಿದೆ. ಸರಕಾರಿ ಕಾಲೇಜಿನಲ್ಲಿ ಶೇ.46.24, ಅನುದಾನಿತ ಕಾಲೇಜು-ಶೇ.57.64, ಅನುದಾನ ರಹಿತ ಶೇ.72.51, ವಿಭಜಿತ ಪದವಿ ಪೂರ್ವ ಕಾಲೇಜು-70.47, ಕಾರ್ಪೊರೇಷನ್ ಕಾಲೇಜು-ಶೇ.50.43ರಷ್ಟು ಫಲಿತಾಂಶ ಲಭಿಸಿದೆ. 

-ಒಟ್ಟು 92 ಕಾಲೇಜುಗಳು ಶೇ.100ರಷ್ಟು ಫಲಿತಾಂಶ ಪಡೆದಿವೆ. ಹಾಗೂ 88 ಕಾಲೇಜುಗಳು ಶೂನ್ಯ ಫಲಿತಾಂಶ ಗಳಿಸಿವೆ.
-68,866 ವಿದ್ಯಾರ್ಥಿಗಳು ಉನ್ನತ ಶ್ರೇಣಿ, 2,21866 ವಿದ್ಯಾರ್ಥಿಗಳು ಪ್ರಥಮ ದರ್ಜೆ, 77,455 ವಿದ್ಯಾರ್ಥಿಗಳು ದ್ವಿತೀಯ ದರ್ಜೆ ಹಾಗೂ 49,110 ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
-ಅನುತ್ತೀರ್ಣ ವಿದ್ಯಾರ್ಥಿಗಳು ಮುಂದಿನ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಲು ಮರು ಮೌಲ್ಯಮಾಪನದ ಫಲಿತಾಂಶಕ್ಕಾಗಿ ಕಾಯಬಾರದು. ಮೂಲ ಓಎಂಆರ್, ಅನುತ್ತೀರ್ಣ ಅರ್ಜಿ ಅಥವಾ ಹಿಂದಿನ ಎಂಸಿಎಗಳ ಆಧಾರದ ಮೇಲೆ ಪರೀಕ್ಷಾ ಶುಲ್ಕ ಕಟ್ಟಬಹುದು.
-ಮರು ಮೌಲ್ಯಮಾಪನದ ಮತ್ತು ಮರು ಎಣಿಕೆಯ ಫಲಿತಾಂಶವನ್ನು ಇಲಾಖೆಯ www.pue.kar.nic.in ಅಂತರ್ ಜಾಲದಲ್ಲಿ ಪ್ರಕಟಿಸಲಾಗಿದೆ. ಉತ್ತರ ಪತ್ರಿಕೆಯ ಸ್ಕ್ಯಾನಿಂಗ್ ಪ್ರತಿಗಾಗಿ ಅರ್ಜಿ ಸಲ್ಲಿಸಲು ಜು.16ರಿಂದ 30ರವರೆಗೆ ಅವಕಾಶವಿದೆ.
-ಸ್ಕ್ಯಾನಿಂಗ್ ಪ್ರತಿ ಪಡೆಯಲು ಪ್ರತಿ ವಿಷಯಕ್ಕೆ 530 ರೂ. ಹಾಗೂ ಮರು ಮೌಲ್ಯಮಾಪನದ ಪ್ರತಿ ವಿಷಯಕ್ಕೆ 1670 ರೂ.  ಆಗಿದೆ. ಅಂಕಗಳ ಮರು ಎಣಿಕೆಗೆ ಶುಲ್ಕ ಇರುವುದಿಲ್ಲ.
-ದ್ವಿತೀಯ ಪಿಯು ಫಲಿತಾಂಶಕ್ಕೆwww.karresults.nic.in ಗೆ ಸಂಪರ್ಕಿಸಬಹುದು. ಹೆಚ್ಚಿನನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ 080-23083900ಕ್ಕೆ ಕರೆ ಮಾಡಬಹುದು.

ಜಿಲ್ಲಾವಾರು ಫಲಿತಾಂಶ
ಉಡುಪಿ-ಶೇ.90.71, ದಕ್ಷಿಣ ಕನ್ನಡ ಶೇ.90-71, ಕೊಡಗು-ಶೇ.81.53, ಉತ್ತರ ಕನ್ನಡ-ಶೇ.80.97, ಚಿಕ್ಕಮಗಳೂರು-ಶೇ.79.11, ಬೆಂಗಳೂರು ದಕ್ಷಿಣ-ಶೇ.77.56, ಬೆಂಗಳೂರು ಉತ್ತರ-ಶೇ.75.54, ಬಾಗಲಕೋಟೆ ಶೇ.74.59, ಚಿಕ್ಕಬಳ್ಳಾಪುರ ಶೇ.73.74, ಶಿವಮೊಗ್ಗ ಶೇ.72.19, ಹಾಸನ ಶೇ.70.18, ಚಾಮರಾಜನಗರ ಶೇ.69.29, ಬೆಂಗಳೂರು ಗ್ರಾಮಾಂತರ-ಶೇ.69.02, ಹಾವೇರಿ-ಶೇ.68.01, ಮೈಸೂರು-ಶೇ.67.98, ಕೋಲಾರ-ಶೇ.67.42, ಧಾರವಾಡ-ಶೇ.67.31, ಬೀದರ್-ಶೇ.64.61, ದಾವಣಗೆರೆ-ಶೇ.64.09, ಚಿಕ್ಕೋಡಿ-ಶೇ.63.88, ಮಂಡ್ಯ-63.82, ಗದಗ-ಶೇ.63, ತುಮಕೂರು-ಶೇ.62.26, ಬಳ್ಳಾರಿ-ಶೇ.62.02, ರಾಮನಗರ-ಶೇ.60.96, ಕೊಪ್ಪಳ-ಶೇ.60.9, ಬೆಳಗಾವಿ ಶೇ.59.7, ಯಾದಗಿರಿ ಶೇ.58.38, ಕಲಬುರಗಿ ಶೇ.58.27, ಚಿತ್ರದುರ್ಗ ಶೇ.51.42, ರಾಯಚೂರು ಶೇ.56.22 ಹಾಗೂ ವಿಜಯಪುರ ಶೇ.54.22.

ಕೊರೋನ ಸೋಂಕಿನ ನಡುವೆ ಪರೀಕ್ಷೆ ಬರೆದು ದ್ವಿತೀಯ ಪಿಯುಸಿ ಫಲಿತಾಂಶ ಪಡೆದ ಎಲ್ಲ ಮಕ್ಕಳಿಗೂ ಶುಭ ಹಾರೈಸುತ್ತೇನೆ. ತೇರ್ಗಡೆಯಾಗಿರುವ ಮಕ್ಕಳಿಗೆ ಅಭಿನಂದನೆಗಳು. ಸ್ವಲ್ಪ ಹಿನ್ನಡೆಯಾಗಿದ್ದಲ್ಲಿ ಧೈರ್ಯ ವಿಶ್ವಾಸ ಕಳೆದುಕೊಳ್ಳದೆ, ಹಿನ್ನಡೆಯನ್ನು ಸವಾಲಾಗಿ ಸ್ವೀಕರಿಸಿ, ಪೂರಕ ಪರೀಕ್ಷೆಗಳನ್ನು ತೆಗೆದುಕೊಳ್ಳಿ. ತಂದೆ, ತಾಯಿಯರಿಗೆ ಹೆಮ್ಮೆ, ದೇಶಕ್ಕೆ ಕೀರ್ತಿ ತರುವ ಸಾಧನೆ ಮಾಡಿ
-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News