ಕಾಂಗೋದಲ್ಲಿ ಹರಡುತ್ತಿರುವ ಎಬೋಲಾ; 48 ಪ್ರಕರಣಗಳು ಪತ್ತೆ

Update: 2020-07-14 20:05 GMT

ಜಿನೀವ (ಸ್ವಿಟ್ಸರ್ಲ್ಯಾಂಡ್), ಜು. 14: ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೊದ ಪಶ್ಚಿಮ ಭಾಗದಲ್ಲಿ ಎಬೋಲಾ ಸಾಂಕ್ರಾಮಿಕ ರೋಗ ಹರಡುತ್ತಿದೆ; ರಿಪಬ್ಲಿಕ್ ಆಫ್ ಕಾಂಗೊ ಮತ್ತು ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶಗಳ ಗಡಿಗಳಿಗೆ ಹೊಂದಿಕೊಂಡ ವಿಶಾಲ ಪ್ರದೇಶವೊಂದರಲ್ಲಿ ಸುಮಾರು 50 ಎಬೋಲಾ ಪ್ರಕರಣಗಳು ಪತ್ತೆಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್ಒ) ಸೋಮವಾರ ತಿಳಿಸಿದೆ.

ಎಬೋಲಾ ಸಾಂಕ್ರಾಮಿಕದ ಹರಡುವಿಕೆಯನ್ನು ಜೂನ್ 1ರಂದು ಅಧಿಕಾರಿಗಳು ಘೋಷಿಸಿದ ಬಳಿಕ, ಕಾಂಗೋದ ಇಕ್ವೇಟರ್ ಪ್ರಾಂತದಲ್ಲಿ 48 ಪ್ರಕರಣಗಳು ದೃಢಪಟ್ಟಿವೆ ಹಾಗೂ ಮೂರು ಶಂಕಿತ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ಪರಿಣತ ಮೈಕ್ ರಯಾನ್ ಹೇಳಿದ್ದಾರೆ. ಈ ಪೈಕಿ ಒಟ್ಟು 20 ಸಾವುಗಳು ಸಂಭವಿಸಿವೆ.

ಎಬೋಲಾದಿಂದಾಗಿ ಕಾಂಗೋದಲ್ಲಿ ಎರಡು ವರ್ಷಗಳ ಅವಧಿಯಲ್ಲಿ 2,277 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News