ಕಾರು ಚಾಲಕನಿಗೆ ಕೊರೋನ: ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೋಂ ಕ್ವಾರಂಟೈನ್

Update: 2020-07-17 11:28 GMT

ಬೆಂಗಳೂರು, ಜು.17: ತನ್ನ ಕಾರು ಚಾಲಕನಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ಹೋಂ ಕ್ವಾರಂಟೈನ್ ಆಗಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ಮೂರು ದಿನಗಳ ಹಿಂದೆಯೇ ಆಯುಕ್ತರ ಕಾರು ಚಾಲಕನ ಗಂಟಲು ದ್ರವ ಪರೀಕ್ಷೆ ನಡೆಸಲಾಗಿದ್ದು, ಶುಕ್ರವಾರ ಬಂದ ವರದಿಯಲ್ಲಿ ಕೊರೋನ ಸೋಕು ದೃಢಪಟ್ಟಿದೆ. ಹೀಗಾಗಿ, ಆಯುಕ್ತರು ಗೃಹ ದಿಗ್ಬಂಧನ ವಿಧಿಸಿಕೊಂಡಿದ್ದಾರೆ.

ಈ ಕುರಿತು ಸ್ವತಃ ಮಾಹಿತಿ ಹಂಚಿಕೊಂಡಿರುವ ಆಯುಕ್ತರು, ನನ್ನ ಚಾಲಕನಿಗೆ ಕೊರೋನ ಸೋಂಕು ಖಚಿತವಾಗಿರುವ ಕಾರಣದಿಂದಾಗಿ ಇಂದಿನಿಂದ ನಾಲ್ಕು ದಿನಗಳ ಕಾಲ ಹೋಮ್ ಕ್ವಾರಂಟೈನ್‌ಗೆ ಒಳಪಟ್ಟಿದ್ದೇನೆ. ಮೂರು ತಿಂಗಳ ಅವಧಿಯಲ್ಲಿ ಐದನೇ ಬಾರಿಗೆ ಸೋಮವಾರ ಪರೀಕ್ಷೆಗೆ ಒಳಪಡಲಿದ್ದೇನೆ. ಕಾರಣ ಕಂಟೈನ್ಮೆಟ್ ಝೋನ್‌ಗಳಲ್ಲಿ ಕಾರ್ಯ ನಿರ್ವಹಿಸಿದ್ದು ಹಾಗೂ ಹಲವಾರು ಬಾರಿ ಅಜಾಗರೂಕ ಸಂವಹನಗಳಲ್ಲಿ ಪಾಲ್ಗೊಂಡಿದ್ದೆ. ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೇಳುತ್ತಿದ್ದೇನೆ. ಇನ್ನೂ ಸೋಂಕು ದೃಢಪಟ್ಟಿಲ್ಲ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News