ಜಗತ್ತಿನಾದ್ಯಂತ 100 ಗಂಟೆಗಳಲ್ಲಿ 10 ಲಕ್ಷ ಹೊಸ ಕೊರೋನ ಪ್ರಕರಣಗಳು !

Update: 2020-07-20 04:12 GMT

ವಾಶಿಂಗ್ಟನ್: ಕಳೆದ 100 ತಾಸುಗಳಲ್ಲಿ ಜಗತ್ತಿನಾದ್ಯಂತ ಇದೇ ಮೊದಲ ಬಾರಿಗೆ 10 ಲಕ್ಷ ಕೊರೋನ ಸೋಂಕಿನ ಹೊಸ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ವಿಶ್ವದಾದ್ಯಂತ ಕೋವಿಡ್-19 ರೋಗಿಗಳ ಒಟ್ಟು ಸಂಖ್ಯೆ 1.4 ಕೋಟಿಯನ್ನು ದಾಟಿದೆ.

ಕಳೆದ ಜನವರಿಯಲ್ಲಿ ಚೀನಾದ ವುಹಾನ್ ನಗರದಲ್ಲಿ ಕೊರೋನ ವೈರಸ್ ಸೋಂಕಿನ ಮೊದಲ ಪ್ರಕರಣ ವರದಿಯಾಗಿತ್ತು. ಇದಾದ ಮೂರು ತಿಂಗಳುಗಳ ಬಳಿಕ ಜಗತ್ತಿನ ವಿವಿಧ ದೇಶಗಳಲ್ಲಿ ಈ ಸಾಂಕ್ರಾಮಿಕ ರೋಗ ಹರಡಿ, 10 ಲಕ್ಷ ಪ್ರಕರಣಗಳು ವರದಿಯಾಗಿದ್ದವು. ಇದೀಗ ಕೇವಲ ನಾಲ್ಕು ದಿವಸಗಳ ಅವಧಿಯಲ್ಲಿ 1.3 ಕೋಟಿಯಷ್ಟಿದ್ದ ಸೋಂಕಿತರ ಸಂಖ್ಯೆ 1.4 ಕೋಟಿಗೆ ತಲುಪಿದೆ.
ಇದರ ಜೊತೆಗೆ ಕರೋನ ರೋಗಿಗಳ ಸಾವಿನ ಅತ್ಯಧಿಕ ಪ್ರಕರಣಗಳು ಅಮೆರಿಕದಲ್ಲಿ ವರದಿಯಾಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News