ದ್ವಿತೀಯ ಕ್ರಿಕೆಟ್ ಟೆಸ್ಟ್ ವಿಂಡೀಸ್‌ನ ಬ್ಯಾಟಿಂಗ್ ಕುಸಿತ

Update: 2020-07-20 06:19 GMT

ಮ್ಯಾಂಚೆಸ್ಟರ್: ಇಂಗ್ಲೆಂಡ್ ವಿರುದ್ಧ ದ್ವಿತೀಯ ಟೆಸ್ಸ್‌ನಲ್ಲಿ ವೆಸ್ಟ್‌ಇಂಡೀಸ್ ತಂಡದ ಬ್ಯಾಟಿಂಗ್ ಹಠಾತ್ತನೆ ಕುಸಿತಕ್ಕೊಳಗಾಗಿದೆ.

 ಟೆಸ್ಟ್‌ನ ನಾಲ್ಕನೇ ದಿನವಾಗಿರುವ ರವಿವಾರ ವಿಂಡೀಸ್ ಮೊದಲ ಇನಿಂಗ್ಸ್‌ನಲ್ಲಿ 91 ಓವರ್‌ಗಳಲ್ಲಿ 8 ವಿಕೆಟ್ ನಷ್ಟದಲ್ಲಿ 261 ರನ್ ಗಳಿಸಿದೆ.

 ಎರಡನೇ ದಿನ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ ನಲ್ಲಿ ಡೊಮಿನಿಕ್ ಸಿಬ್ಲಿ ಮತ್ತು ಬೆನ್ ಸ್ಟೋಕ್ಸ್ ಶತಕಗಳ ನೆರವಿನಲ್ಲಿ 9 ವಿಕೆಟ್ ನಷ್ಟದಲ್ಲಿ 469 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿತ್ತು. ಬಳಿಕ ಮೊದಲ ಇನಿಂಗ್ಸ್ ಆರಂಭಿಸಿದ ವೆಸ್ಟ್‌ಇಂಡೀಸ್ ದಿನದಾಟದಂತ್ಯಕ್ಕೆ 14 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 32 ರನ್ ಗಳಿಸಿತ್ತು.

ಕ್ಯಾಂಪ್‌ಬೆಲ್ 12ರನ್ ಗಳಿಸಿ ಔಟಾಗಿದ್ದರು. ಬ್ರಾಥ್‌ವೈಟ್ ಔಟಾಗದೆ 6 ರನ್ ಮತ್ತು ಅಲ್ಝಾರಿ ಜೋಸೆಫ್ 14 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಮೂರನೇ ದಿನದಾಟ ಮಳೆಯಿಂದಾಗಿ ಕೊಚ್ಚಿ ಹೋಗಿತ್ತು.

ರವಿವಾರ ನಾಲ್ಕನೇ ದಿನದ ಆಟ ಮುಂದುವರಿಸಿದ ವೆಸ್ಟ್‌ಇಂಡೀಸ್ ಪರ ಕ್ರೆಗ್ ಬ್ರಾಥ್‌ವೈಟ್ (75) ಮತ್ತು ಶಾಮ್ರಾ ಬ್ರೂಕ್ಸ್(68) ಅರ್ಧಶತಕಗಳ ಕೊಡುಗೆ ನೀಡಿದರು. ಅಲ್ಝಾರಿ ಜೋಸೆಫ್ (32), ಶೈ ಹೋಪ್(25) ಎರಡಂಕೆಯ ಸ್ಕೋರ್ ದಾಖಲಿಸಿ ಔಟಾದರು. ಜೆರ್ಮೈನ್ ಬ್ಲಾಕ್‌ವುಡ್ (0), ಶಾನೆ ಡೊವ್ರಿಚ್(0) ಖಾತೆ ತೆರೆಯಲಿಲ್ಲ. ಜೇಸನ್ ಹೋಲ್ಡರ್ 2 ರನ್ ಗಳಿಸಿ ನಿರ್ಗಮಿಸಿದರು. ರೋಸ್ಟನ್ ಚೇಸ್ (ಔಟಾಗದೆ 30) ಹೋರಾಟ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News