ಅಮೆರಿಕ, ಇಸ್ರೇಲ್‌ಗಾಗಿ ಬೇಹುಗಾರಿಕೆ ಆರೋಪ: ಇರಾನ್ ಪ್ರಜೆಗೆ ಮರಣ ದಂಡನೆ ಜಾರಿ

Update: 2020-07-20 17:26 GMT
ಸಾಂದರ್ಭಿಕ ಚಿತ್ರ

ಟೆಹರಾನ್ (ಇರಾನ್), ಜು. 20: ಅಮೆರಿಕ ಮತ್ತು ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳಿಗಾಗಿ ಬೇಹುಗಾರಿಕೆ ನಡೆಸಿರುವ ಆರೋಪದ ಮೇಲೆ ಇರಾನ್ ಪ್ರಜೆಯೊಬ್ಬನನ್ನು ಸೋಮವಾರ ಇರಾನ್‌ನಲ್ಲಿ ಮರಣ ದಂಡನೆಗೆ ಗುರಿಪಡಿಸಲಾಗಿದೆ ಎಂದು ಇರಾನ್‌ನ ಅಧಿಕೃತ ಐಆರ್‌ಐಬಿ ಸುದ್ದಿಸಂಸ್ಥೆ ತಿಳಿಸಿದೆ.

2018ರಲ್ಲಿ ಬಂಧಿಸಲ್ಪಟ್ಟಿದ್ದ ವ್ಯಕ್ತಿಯು ರೆವಲೂಶನರಿ ಗಾರ್ಡ್ಸ್‌ನ ಮಾಜಿ ಕಮಾಂಡರ್ ಖಾಸಿಮ್ ಸುಲೈಮಾನಿಯ ಮೇಲೆ ಬೇಹುಗಾರಿಕೆ ನಡೆಸಿದ್ದರು ಎಂದು ಕಳೆದ ತಿಂಗಳು ಇರಾನ್ ನ್ಯಾಯಾಲಯವೊಂದು ಹೇಳಿತ್ತು. ಆದರೆ, ಈ ವರ್ಷದ ಆರಂಭದಲ್ಲಿ ನಡೆದ ಸುಲೈಮಾನಿಯ ಹತ್ಯೆಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಅದು ತಿಳಿಸಿದೆ.

ಬಗ್ದಾದ್‌ನ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪ ಜನವರಿ 3ರಂದು ಅಮೆರಿಕ ನಡೆಸಿದ ಡ್ರೋನ್ ದಾಳಿಯಲ್ಲಿ ಸುಲೈಮಾನಿ ಮೃತಪಟ್ಟಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News