ಕೊಲಂಬಿಯ: ಸೇನಾ ಹೆಲಿಕಾಪ್ಟರ್ ಪತನ; 9 ಸೈನಿಕರು ಸಾವು

Update: 2020-07-22 16:07 GMT

ಬೊಗೊಟ (ಕೊಲಂಬಿಯ), ಜು. 22: ಬಂಡುಕೋರರ ವಿರುದ್ಧದ ಕಾರ್ಯಾಚರಣೆಯಲ್ಲಿ ತೊಡಗಿದ್ದಾಗ ಮಂಗಳವಾರ ಕೊಲಂಬಿಯ ದೇಶದ ಹೆಲಿಕಾಪ್ಟರೊಂದು ಪತನಗೊಂಡಿದ್ದು, ಒಂಬತ್ತು ಮಂದಿ ಸೈನಿಕರು ಮೃತಪಟ್ಟಿದ್ದಾರೆ, 6 ಮಂದಿ ಗಾಯಗೊಂಡಿದ್ದಾರೆ ಹಾಗೂ ಇಬ್ಬರು ನಾಪತ್ತೆಯಾಗಿದ್ದಾರೆ.

ಒಂಬತ್ತು ಸೈನಿಕರ ದೇಹಗಳು ಪತ್ತೆಯಾಗಿವೆ ಎಂದು ಕೊಲಂಬಿಯ ಸೇನೆ ತಿಳಿಸಿದೆ.

ಬ್ಲ್ಯಾಕ್‌ಹಾಕ್ ಹೆಲಿಕಾಪ್ಟರ್ ಪತನಗೊಂಡಾಗ ಅದರಲ್ಲಿ 17 ಸೇನಾ ಸಿಬ್ಬಂದಿಯಿದ್ದರು. ಹೆಲಿಕಾಪ್ಟರ್ ಅಪಘಾತಕ್ಕೀಡಾಯಿತೇ ಅಥವಾ ಅದನ್ನು ಹೊಡೆದುರುಳಿಸಲಾಯಿತೇ ಎನ್ನುವುದನ್ನು ಸೇನೆ ತಿಳಿಸಿಲ್ಲ.

ಅರ್ಧ ಶತಮಾನದ ಕಾಲದ ಸರಕಾರದೊಂದಿಗೆ ಸಂಘರ್ಷದಲ್ಲಿ ತೊಡಗಿದ್ದ ರೆವಲೂಶನರಿ ಆರ್ಮ್ಡ್ ಫೋರ್ಸಸ್ ಆಫ್ ಕೊಲಂಬಿಯ (ಎಫ್‌ಎಆರ್‌ಸಿ) ಬಂಡುಕೋರ ಸಂಘಟನೆಯು 2016ರಲ್ಲಿ ಐತಿಹಾಸಿಕ ಶಾಂತಿ ಒಪ್ಪಂದವೊಂದರ ಮೂಲಕ ತನ್ನ ಸಂಘರ್ಷವನ್ನು ನಿಲ್ಲಿಸಿತ್ತು. ಆದರೆ ಗುಂಪಿನ 13,000 ಸದಸ್ಯರು ಶರಣಾದರೂ, ಭಿನ್ನಮತೀಯ 2,000ದಷ್ಟು ಬಂಡುಕೋರರು ಶರಣಾಗಲು ನಿರಾಕರಿಸಿ ಸಂಘರ್ಷವನ್ನು ಮುಂದುವರಿಸಿದ್ದಾರೆ.

ಈ ಭಿನ್ನಮತೀಯ ಬಂಡುಕೋರರ ದಮನ ಕಾರ್ಯಾಚರಣೆಯ ವೇಳೆ ಹೆಲಿಕಾಪ್ಟರ್ ಪತನಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News