ಕೊರೋನ ರೋಗಿಗಳಲ್ಲಿ ಕ್ಲೋರೋಕ್ವಿನ್, ಎಚ್‌ಸಿಕ್ಯೂ ಪರಿಣಾಮ ಶೂನ್ಯ: ಹೊಸ ಅಧ್ಯಯನಗಳು

Update: 2020-07-22 16:51 GMT

ಬರ್ಲಿನ್ (ಜರ್ಮನಿ), ಜು. 22: ಕ್ಲೋರೋಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ (ಎಚ್‌ಸಿಕ್ಯೂ) ಔಷಧಿಗಳನ್ನು ಒಂಟಿಯಾಗಿಯಾಗಲಿ ಅಥವಾ ಆ್ಯಂಟಿಬಯಾಟಿಕ್ ಅಝಿತ್ರೋಮೈಸಿನ್ ಜೊತೆ ಆಗಲಿ ಸೇವಿಸಿದಾಗ ಮಂಗಗಳು ಅಥವಾ ಮಾನವ ಶ್ವಾಸಕೋಶದ ಜೀವಕೋಶಗಳಲ್ಲಿ ನೋವೆಲ್ ಕೊರೋನ ವೈರಸ್ ಸೋಂಕಿನ ವಿರುದ್ಧ ಯಾವುದೇ ಗಣನೀಯ ವೈರಸ್ ನಿರೋಧಕ ಪರಿಣಾಮವನ್ನು ತೋರಿಸುವುದಿಲ್ಲ ಎಂದು ‘ನೇಚರ್’ ಪತ್ರಿಕೆಯಲ್ಲಿ ಪ್ರಕಟಗೊಂಡ ಹೊಸ ಅಧ್ಯಯನಗಳು ತಿಳಿಸಿವೆ.

ಮಲೇರಿಯ ರೋಗದ ಚಿಕಿತ್ಸೆಯಲ್ಲಿ ಸಾಮಾನ್ಯವಾಗಿ ಬಳಸುವ ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕ್ಲೋರೋಕ್ವಿನ್ ಔಷಧಿಗಳನ್ನು ಕೋವಿಡ್-19 ಚಿಕಿತ್ಸೆಯಲ್ಲಿ ಬಳಸುವ ಸಾಧ್ಯತೆ ಬಗ್ಗೆ 80ಕ್ಕೂ ಅಧಿಕ ಕ್ಲಿನಿಕಲ್ ಪರೀಕ್ಷೆಗಳನ್ನು ನಡೆಸಲಾಗಿದೆ ಹಾಗೂ ಅವುಗಳು ಜೀವಕೋಶಗಳಲ್ಲಿ ಕೊರೋನ ವೈರಸ್ ಸೋಂಕನ್ನು ತಡೆಯುವುದು ಕಂಡುಬಂದಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆದರೆ, ಕೊರೋನ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ಈ ಔಷಧಿಗಳ ಪರಿಣಾಮವು ಚರ್ಚಾಸ್ಪದವಾಗಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News