ಗೆಲುವಿನ ಹಾದಿಗೆ ಮರಳಿದ ಆನಂದ್ ಲೆಜೆಂಡ್ಸ್ ಆಫ್ ಚೆಸ್ ಟೂರ್ನಿ

Update: 2020-07-29 05:21 GMT

ಚೆನ್ನೈ: ಭಾರತದ ಖ್ಯಾತ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಲೆಜೆಂಡ್ಸ್ ಆಫ್ ಚೆಸ್ ಟೂರ್ನಿಯ ಏಳನೇ ಸುತ್ತಿನಲ್ಲಿ ಗೆಲುವು ದಾಖಲಿಸುವ ಮೂಲಕ ಕೊನೆಗೂ ಸೋಲಿನ ಸರಮಾಲೆಯನ್ನು ಕಳಚಿಕೊಂಡಿದ್ದಾರೆ. ಸೋಮವಾರ ನಡೆದ ಏಳನೇ ಸುತ್ತಿನಲ್ಲಿ ಇಸ್ರೆಲ್‌ನ ಬೊರಿಸ್ ಗೆಲ್‌ಫಾಂಡ್ ಅವರನ್ನು 2.5-0.5ರಿಂದ ಸೋಲಿಸುವ ಮೂಲಕ ವಿಶ್ವನಾಥನ್ ಆನಂದ್ ಅಂತಿಮವಾಗಿ ಲೆಜೆಂಡ್ಸ್ ಆಫ್ ಚೆಸ್ ಪಂದ್ಯಾವಳಿಯಲ್ಲಿ ಗೆಲುವಿನ ಹಾದಿಗೆ ಮರಳಿದರು.

ದೀರ್ಘಕಾಲದ ಪ್ರತಿಸ್ಪರ್ಧಿ ಬೊರಿಸ್ ವಿರುದ್ಧ ಆನಂದ್ ಆರಂಭದಲ್ಲಿ ಹಿನ್ನೆಡೆ ಅನುಭವಿಸಿದ್ದರೂ, 45 ನಡೆಗಳಲ್ಲಿ ಮೊದಲ ಗೇಮ್ ಗೆದ್ದು ಶುಭಾರಂಭ ಮಾಡಿದರು.

ಕಪ್ಪು ಕಾಯಿಗಳೊಂದಿಗೆ ಆಡಿದ ಆನಂದ್ 49 ನಡೆಗಳಲ್ಲಿ ಎರಡನೇ ಗೇಮ್‌ನ್ನು ಪಡೆಯುವ ಮೂಲಕ ಉತ್ತಮ ಆಟವನ್ನು ಮುಂದುವರಿಸಿದರು.

 2012ರ ವಿಶ್ವ ಚಾಂಪಿಯನ್‌ಶಿಪ್ ಚಾಲೆಂಜರ್ ಬೊರಿಸ್ ವಿರುದ್ಧ ಆನಂದ್ ಮೂರನೇ ಗೇಮ್‌ನಲ್ಲಿ 46 ನಡೆಗಳಲ್ಲಿ ಡ್ರಾ ಸಾಧಿಸಿದರು.

  ‘‘ಮೊದಲ ಮೂರು ದಿನಗಳಂತೆ ಕಳೆದ ಮೂರು ದಿನಗಳು ವಿನಾಶಕಾರಿಯಾಗಿರಲಿಲ್ಲ, ಆದರೆ ಗೆಲುವಿನಿಂದ ಸಂತೋಷವಾಗಿದೆ ’’ಎಂದು ಮ್ಯಾಗ್ನಸ್ ಕಾರ್ಲ್‌ಸನ್ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದ ಆನಂದ್ ಹೇಳಿದರು.

  ಈ ಗೆಲುವು ಹಂಗೇರಿಯ ಪೀಟರ್ ಲೇಕೊ (5 ಅಂಕಗಳು) ಮತ್ತು ಚೀನಾದ ವಿಶ್ವದ ಮೂರನೇ ಕ್ರಮಾಂಕದ ಡಿಂಗ್ ಲಿರೆನ್ (3) ಅವರಿಗಿಂತ ಆರು ಪಾಯಿಂಟ್‌ಗಳೊಂದಿಗೆ ಮಾಜಿ ವಿಶ್ವ ಚಾಂಪಿಯನ್ ಆನಂದ್ ಎಂಟನೇ ಸ್ಥಾನಕ್ಕೆ ತಲುಪಿದರು. ವಿಶ್ವದ ನಂ.15 ಆನಂದ್ ಅವರು ಎಂಟನೇ ಸುತ್ತಿನಲ್ಲಿ ಲಿರೆನ್‌ರನ್ನು ಎದುರಿಸಲಿರುವರು.

    ವಿಶ್ವದ ನಂಬರ್ ಒನ್ ಮ್ಯಾಗ್ನಸ್ ಕಾರ್ಲ್‌ಸನ್ ಅವರು ಪೀಟರ್ ಸ್ವಿಡ್ಲರ್ ಅವರನ್ನು 2.5-1.5ರಿಂದ ಸೋಲಿಸಿ 20 ಅಂಕಗಳನ್ನು ಸಂಪಾದಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ರಶ್ಯದ ಇಯಾನ್ ನೆಪೋಮ್ನಿಯಾಚ್ಚಿ ಅವರು ಲೇಕೊರನ್ನು 3-2ರಿಂದ ಸೋಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News