ಸರ್ಫರಾಝ್ ಅಹ್ಮದ್, ವಹಾಬ್ ರಿಯಾಝ್ ಪಾಕ್ ತಂಡಕ್ಕೆ ವಾಪಸ್

Update: 2020-07-29 05:24 GMT

ಕರಾಚಿ: ಮುಂದಿನ ವಾರದಿಂದ ಆರಂಭವಾಗಲಿರುವ ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್‌ಗಳ ಸರಣಿಗೆ ಪಾಕಿಸ್ತಾನದ 20 ಮಂದಿ ಸದಸ್ಯರ ತಂಡಕ್ಕೆ ಮಾಜಿ ನಾಯಕ ಸರ್ಫರಾಝ್ ಅಹ್ಮದ್ ಮತ್ತು ವೇಗದ ಬೌಲರ್ ವಹಾಬ್ ರಿಯಾಝ್‌ರನ್ನು ವಾಪಸ್ ಕರೆಸಿಕೊಳ್ಳಲಾಗಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ತಿಳಿಸಿದೆ.

ಕೋವಿಡ್ -19 ಸಾಂಕ್ರಾಮಿಕ ರೋಗದ ಮಧ್ಯೆ ಇಂಗ್ಲೆಂಡ್‌ನ ಜೈವಿಕ ಸುರಕ್ಷಿತ ವಾತಾವರಣದಲ್ಲಿ ಪಾಕಿಸ್ತಾನವು ಆಗಸ್ಟ್ -ಸೆಪ್ಟೆಂಬರ್‌ನಲ್ಲಿ ಮೂರು ಟೆಸ್ಟ್ ಮತ್ತು ಮೂರು ಟ್ವೆಂಟಿ -20 ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ.

ಪಂದ್ಯಗಳಿಗಾಗಿ ಪಿಸಿಬಿ 29 ಮಂದಿಯ ಸಂಯೋಜಿತ ತಂಡವನ್ನು ಹೆಸರಿಸಿದೆ.

  

     ವಿಕೆಟ್ ಕೀಪರ್ ಸರ್ಫರಾಝ್ ಅವರನ್ನು ಕಳೆದ ವರ್ಷ ಎಲ್ಲಾ ಮಾದರಿಯ ಕ್ರಿಕೆಟ್ ತಂಡಗಳ ನಾಯಕತ್ವದಿಂದ ಕೆಳಗಿಳಿಸಿತ್ತು. 2019 ಜನವರಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು. ಅಕ್ಟೋಬರ್ 2018ರಲ್ಲಿ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದ ವಹಾಬ್ ಬಳಿಕ ತಂಡದಿಂದ ದೂರವಾಗಿದ್ದರು. ಮ್ಯಾಂಚೆಸ್ಟರ್ ಬುಧವಾರದಿಂದ ಮೊದಲ ಟೆಸ್ಟ್ ಆರಂಭಗೊಳ್ಳಲಿದೆ. ಉಳಿದ ಎರಡು ಟೆಸ್ಟ್ ಪಂದ್ಯಗಳು ಸೌತಾಂಪ್ಟನ್‌ನಲ್ಲಿ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News