ಆನಂದ್‌ಗೆ 7ನೇ ಸೋಲು ಲೆಜೆಂಡ್ಸ್ ಆಫ್ ಚೆಸ್ ಟೂರ್ನಿ

Update: 2020-07-30 05:27 GMT

ಚೆನ್ನೈ: ಮಾಜಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಲೆಜೆಂಡ್ಸ್ ಆಫ್ ಚೆಸ್ ಆನ್‌ಲೈನ್ ಪಂದ್ಯಾವಳಿಯಲ್ಲಿ ಏಳನೇ ಸೋಲು ಅನುಭವಿಸಿದ್ದಾರೆ.

 ಎಂಟನೇ ಸುತ್ತಿನಲ್ಲಿ ವಿಶ್ವದ 3ನೇ ಕ್ರಮಾಂಕದ ಡಿಂಗ್ ಲಿರೆನ್ ವಿರುದ್ಧ 0.5-2.5 ಅಂತರದಲ್ಲಿ ಅವರು ಸೋಲುಂಡರು. ಆರು ಪಂದ್ಯಗಳ ಸೋಲಿನ ಹಾದಿಯನ್ನು ಕೊನೆಗೊಳಿಸಿ ಏಳನೇ ಸುತ್ತಿನಲ್ಲಿ ಜಯ ಗಳಿಸಿದ್ದ ಆನಂದ್ ಮಂಗಳವಾರ ತಡರಾತ್ರಿ ಕೇವಲ 22 ನಡೆಗಳಲ್ಲಿ ಸಾಗಿದ ಪಂದ್ಯದ ಮೊದಲ ಗೇಮ್‌ನಲ್ಲೇ ಎದುರಾಳಿಗೆ ಶರಣಾದರು.

47 ನಡೆಗಳ ಎರಡನೇ ಗೇಮ್ ಡ್ರಾಗೊಂಡಿತು. ಮೂರನೇ ಗೇಮ್‌ನಲ್ಲಿ 41 ನಡೆಗಳಲ್ಲಿ ಕಪ್ಪುಕಾಯಿಗಳೊಂದಿಗೆ ಆಡಿದ ಲಿರೆನ್ ಗೆಲುವಿನ ನಗೆ ಬೀರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News