ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವರ್ಗಾವಣೆ ಸಾಧ್ಯತೆ ?

Update: 2020-07-30 11:59 GMT

ಬೆಂಗಳೂರು, ಜು.30: ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಅವರು ವರ್ಗಾವಣೆ ಆಗಿ, ಇದೇ ಸ್ಥಾನಕ್ಕೆ ಗುಪ್ತದಳದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಕಮಲ್‍ ಪಂತ್ ಅವರು ನೇಮಕವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಕಮಲ್‍ ಪಂತ್ ಅವರು ಎಡಿಜಿಪಿಗಳ ಸೇವಾ ಹಿರಿತನದಲ್ಲಿ ಮುಂದಿದ್ದು, ಕಾನೂನು ಸುವ್ಯವಸ್ಥೆ ಹಾಗೂ ಗುಪ್ತದಳದ ಎಡಿಜಿಪಿಯಾಗಿ ಕಾರ್ಯ ನಿಭಾಯಿಸಿದ್ದಾರೆ. ಶಿವಮೊಗ್ಗ ಇನ್ನಿತರ ಕಡೆಗಳಲ್ಲಿ ಎಸ್ಪಿ ಆಗಿಯೂ ಕೇಂದ್ರ ವಲಯ ಐಜಿಪಿಯಾಗಿ ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿರುವ ಕಾರ್ಯ ನಿರ್ವಹಿಸಿರುವ ಅನುಭವ ಹೊಂದಿರುವ ಕಮಲ್‍ ಪಂತ್ ಅವರನ್ನು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ನಿಯೋಜಿಸಲು ಮುಖ್ಯಮಂತ್ರಿಗಳು ಒಲವು ತೋರಿದ್ದಾರೆ ಎನ್ನಲಾಗಿದೆ.

ಅಲ್ಲದೆ, ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಎಡಿಜಿಪಿಗಳಾದ ಕಮಲ್‍ ಪಂತ್, ಸುನಿಲ್ ಅಗ್ರವಾಲ್ ಹಾಗೂ ಅಮೃತ್‍ ಪೌಲ್ ನಡುವೆ ಪೈಪೋಟಿ ಇದ್ದು, ಕಮಲ್‍ ಪಂತ್ ಅವರನ್ನು ನೂತನ ಆಯುಕ್ತರಾಗಿ ನೇಮಕ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News