ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್‌ಗೆ ಕೊರೋನ ಸೋಂಕು ದೃಢ

Update: 2020-08-02 17:17 GMT

ಚೆನ್ನೈ, ಜು.2: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಅವರು ಕೊರೋನ ಸೊಂಕಿಗೆ ಒಳಗಾಗಿರುವುದು ರವಿವಾರ ದೃಢಪಟ್ಟಿದೆ. ಅವರನ್ನು ಚೆನ್ನೈಯ ಕಾವೇರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಬನ್ವಾರಿಲಾಲ್ ಪುರೋಹಿತ್ ಅವರಿಗೆ ಕೊರೋನದ ಯಾವುದೇ ಲಕ್ಷಣ ಇಲ್ಲ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ಹೇಳಿಕೆ ತಿಳಿಸಿದೆ.

‘‘ಅವರನ್ನು ಹಲವು ಪರೀಕ್ಷೆಗೆ ಒಳಪಡಿಸಲಾಗಿದೆ. ಅವರ ಸೋಂಕು ಲಘುವಾಗಿರುವುದರಿಂದ ಹೋಮ್ ಐಸೋಲೇಶನ್‌ಗೆ ಸಲಹೆ ನೀಡಲಾಗಿದೆ’’ ಎಂದು ಹೇಳಿಕೆ ತಿಳಿಸಿದೆ.

ಜುಲೈ 23ರಂದು ರಾಜ ಭವನದ 84 ಭದ್ರತಾ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟ ಬಳಿಕ ಜುಲೈ 29ರಿಂದ ಬನ್ವಾರಿಲಾಲ್ ಪುರೋಹಿತ್ ಅವರು 7 ದಿನಗಳ ಹೋಮ್ ಐಸೋಲೇಶನ್‌ನಲ್ಲಿ ಇದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಅನಂತರ 38 ಮಂದಿಗೆ ಕೊರೋನ ಪರೀಕ್ಷೆ ನಡೆಸಲಾಗಿದೆ. ಅವರಲ್ಲಿ ಮೂವರಿಗೆ ಕೊರೋನ ಸೋಂಕು ದೃಢಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News