ಬೈರ್‌ಸ್ಟೋವ್ ಭರ್ಜರಿ ಬ್ಯಾಟಿಂಗ್: ಇಂಗ್ಲೆಂಡ್ ಗೆ ಜಯ

Update: 2020-08-03 04:49 GMT

ಸೌತಾಂಪ್ಟನ್: ಸೌತಾಂಪ್ಟನ್‌ನಲ್ಲಿ ಶನಿವಾರ ನಡೆದ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ಜಾನಿ ಬೈರ್‌ಸ್ಟೋವ್ ಭರ್ಜರಿ ಬ್ಯಾಟಿಂಗ್ ನೆರವಿನಲ್ಲಿ ಐರ್‌ಲ್ಯಾಂಡ್ ವಿರುದ್ಧ ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳ ಜಯ ಗಳಿಸಿದ್ದು, ಇಂಗ್ಲೆಂಡ್ ಐಸಿಸಿ ಏಕದಿನ ವಿಶ್ವಕಪ್ ಸೂಪರ್ ಲೀಗ್ ಸರಣಿಯನ್ನು ಇನ್ನೂ ಒಂದು ಪಂದ್ಯ ಆಡಲು ಬಾಕಿ ಇರುವಾಗಲೇ 2-0 ಅಂತರದಲ್ಲಿ ವಶಪಡಿಸಿಕೊಂಡಿದೆ.

 ಇಂಗ್ಲೆಂಡ್‌ನ ಜಾನಿ ಬೈರ್‌ಸ್ಟೋವ್ ಆಕರ್ಷಕ 82 ರನ್ (41ಎ, 14ಬೌ,2ಸಿ) ದಾಖಲಿಸಿ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟಾಸ್ ಗೆದ್ದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಐರ್‌ಲ್ಯಾಂಡ್ ತನ್ನ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 212ರನ್ ಗಳಿಸಿತ್ತು. ತಂಡದ ಹೊಸ ಆಟಗಾರ ಕರ್ಟಿಸ್ ಕ್ಯಾಂಪರ್ (68) ಮತ್ತೆ ಅಗ್ರ ಸ್ಕೋರರ್ ಎನಿಸಿಕೊಂಡರು. ಗೆಲುವಿಗೆ 213ರನ್ ಗಳಿಸಬೇಕಿದ್ದ ಇಂಗ್ಲೆಂಡ್ 32.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 216 ರನ್ ಗಳಿಸುವ ಮೂಲಕ ಎರಡನೇ ಗೆಲುವು ದಾಖಲಿಸಿತು.

 ಮಧ್ಯಮ ಸರದಿಯ ಬ್ಯಾಟಿಂಗ್ ಕುಸಿತದ ನಂತರ ಸ್ಯಾಮ್ ಬಿಲ್ಲಿಂಗ್ಸ್ (ಔಟಾಗದೆ 46) ಮತ್ತು ಡೇವಿಡ್ ವಿಲ್ಲಿ (ಔಟಾಗದೆ 47) ಇಂಗ್ಲೆಂಡ್ ತಂಡವನ್ನು ಆಧರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News