ಕೊರೋನ ವೈರಸ್: ದೇಶದಲ್ಲಿ ದಾಖಲಾಗಿರುವ ಸಾವುಗಳ ಮಾಹಿತಿ ಬಿಡುಗಡೆಗೆ ಸಂಶೋಧಕರು, ವಿಜ್ಞಾನಿಗಳ ಆಗ್ರಹ

Update: 2020-08-03 14:12 GMT

ಹೊಸದಿಲ್ಲಿ, ಆ.3: ಭಾರತದಲ್ಲಿ ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಜೀವಹಾನಿ ಪರಿಣಾಮವನ್ನು ತಿಳಿದುಕೊಳ್ಳಲು ದಾಖಲಾಗಿರುವ ಸಾವುಗಳ ಕುರಿತು ಎಲ್ಲ ಲಭ್ಯ ಮಾಹಿತಿಗಳನ್ನು ತಕ್ಷಣವೇ ಬಿಡುಗಡೆಗೊಳಿಸುವಂತೆ ಸಂಶೋಧಕರು, ವಿಜ್ಞಾನಿಗಳು,ಪತ್ರಕರ್ತರು ಮತ್ತು ಸಾರ್ವಜನಿಕ ಆರೋಗ್ಯ ವೃತ್ತಿಪರರು ಸೇರಿದಂತೆ 231 ಗಣ್ಯರ ಗುಂಪೊಂದು ಭಾರತ ಸರಕಾರವನ್ನು ಆಗ್ರಹಿಸಿದೆ.

ಜನನಗಳು ಮತ್ತು ಸಾವುಗಳನ್ನು ದಾಖಲಿಸಿಕೊಳ್ಳುವ ಪ್ರಮುಖ ನೋಂದಣಿ ವ್ಯವಸ್ಥೆಗಳು ಅತ್ಯುತ್ತಮ ಆರೋಗ್ಯ ನಿಗಾ ಸಾಧನಗಳಾಗಿದ್ದು,ಸಾಂಕ್ರಾಮಿಕಗಳಿಗೆ ಪ್ರತಿಕ್ರಿಯಿಸುವ ನಿಟ್ಟಿನಲ್ಲಿ ಅಮೂಲ್ಯವಾಗಿವೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಗುಂಪು,ಈ ಮಾಹಿತಿಗಳು ಸಾಂಕ್ರಾಮಿಕದಿಂದ ಅತಿರಿಕ್ತ ಸಾವುಗಳ ಕುರಿತು ಅಂಕಿಸಂಖ್ಯೆಗಳನ್ನು ಲೆಕ್ಕ ಹಾಕಲು ನೆರವಾಗುತ್ತವೆ ಮತ್ತು ಈ ಅಂಕಿಸಂಖ್ಯೆಗಳು ಸಾರ್ವಜನಿಕ ಆರೋಗ್ಯ ನೀತಿಗಳನ್ನು ರೂಪಿಸಲು,ಹೆಚ್ಚಿನ ಕೊರೋನ ವೈರಸ್ ಅಪಾಯವಿರುವ ಪ್ರದೇಶಗಳನ್ನು ಗುರುತಿಸಲು ಮತ್ತು ಪರೀಕ್ಷಾ ವ್ಯವಸ್ಥೆಯನ್ನು ಹೆಚ್ಚಿಸಲು ಅಧಿಕಾರಿಗಳಿಗೆ ನೆರವಾಗುತ್ತವೆ ಎಂದು ಹೇಳಿದೆ.

ಮುಖ್ಯವಾಗಿ ಭಾರತದ ಮಹಾ ನೋಂದಣಾಧಿಕಾರಿ ಮತ್ತು ಜನಗಣತಿ ಆಯುಕ್ತರು,ರಾಜ್ಯ ನೋಂದಣಾಧಿಕಾರಿಗಳು, ಸಾವುಗಳ ದಾಖಲೆಗಳನ್ನು ನಿರ್ವಹಿಸುವ ನಗರ ಪಾಲಿಕೆಗಳಂತಹ ಸಂಸ್ಥೆಗಳನ್ನು ಉದ್ದೇಶಿಸಿ ಗುಂಪು ತನ್ನ ಅಹವಾಲನ್ನು ಸಲ್ಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News