ನಕಲಿ ಶಿಕ್ಷಣ ಏಜೆಂಟರ ಬಗ್ಗೆ ಎಚ್ಚರಿಕೆಯಿಂದಿರಿ

Update: 2020-08-03 16:41 GMT

ಲಂಡನ್, ಆ. 3: ಭಾರತದಲ್ಲಿ ಯಾವುದೇ ನಿಯಂತ್ರಣಕ್ಕೆ ಒಳಪಡದೆ ಕಾರ್ಯಾಚರಿಸುತ್ತಿರುವ ನಕಲಿ ಶಿಕ್ಷಣ ಏಜೆಂಟರ ಬಗ್ಗೆ ಎಚ್ಚರಿಕೆಯಿಂದಿರುವಂತೆ ಬ್ರಿಟನ್‌ನಲ್ಲಿ ಭಾರತೀಯ ವಿದ್ಯಾರ್ಥಿಗಳನ್ನು ಪ್ರತಿನಿಧಿಸುವ ಪ್ರಮುಖ ಸಂಘಟನೆ ಎನ್‌ಐಎಸ್‌ಎಯು-ಯುಕೆ ಹೇಳಿದೆ.

ಸೆಪ್ಟಂಬರ್‌ನಲ್ಲಿ ಆರಂಭಗೊಳ್ಳುವ ಹೊಸ ಶೈಕ್ಷಣಿಕ ವರ್ಷಕ್ಕೆ ಮುನ್ನ, ಬ್ರಿಟನ್ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶಕ್ಕಾಗಿ ಅರ್ಜಿ ಹಾಕಿರುವ ಭಾರತೀಯ ವಿದ್ಯಾರ್ಥಿಗಳ ಕಳವಳಗಳನ್ನು ಪರಿಹರಿಸುವುದಕ್ಕಾಗಿ ನಡೆಸಿದ ಮೊದಲ ಅಶರೀರ ಸಂವಹನ ಕಾರ್ಯಕ್ರಮದಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ವಾರಾಂತ್ಯದಲ್ಲಿ ನಡೆದ ತನ್ನ ಸಂವಹನ ಕಾರ್ಯಕ್ರಮದಲ್ಲಿ 2,000ಕ್ಕೂ ಅಧಿಕ ವಿದ್ಯಾರ್ಥಿಗಳು ವೀಡಿಯೊ ಲಿಂಕ್ ಮೂಲಕ ಭಾಗವಹಿಸಿದ್ದಾರೆ ಎಂದು ಸಂಘಟನೆ ತಿಳಿಸಿದೆ.

ಶಿಕ್ಷಣ ಏಜಂಟರಿಂದ ತಪ್ಪುದಾರಿಗೆಳೆಯುವ ಹಾಗೂ ಪಕ್ಷಪಾತಪೂರಿತ ಮಾಹಿತಿಗಳನ್ನು ಪಡೆಯುತ್ತಿರುವ ಬಗ್ಗೆ ಹೆಚ್ಚಿನ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ವೇಳೆ ದೂರಿಕೊಂಡಿದ್ದಾರೆ. ಭಾರತದಲ್ಲಿ ಈ ತಥಾಕಥಿತ ಶಿಕ್ಷಣ ಏಜಂಟರು ಯಾವುದೇ ನಿಯಂತ್ರಣಕ್ಕೆ ಒಳಪಡದೆ ಕಾರ್ಯಾಚರಿಸುತ್ತಿದ್ದಾರೆ.

ಈ ಕ್ಷೇತ್ರವನ್ನು ಸೂಕ್ತ ರೀತಿಯಲ್ಲಿ ನಿಯಂತ್ರಿಸುವಂತೆ ಎನ್‌ಐಎಸ್‌ಎಯು ಈ ಹಿಂದೆ ಭಾರತ ಸರಕಾರವನ್ನು ಒತ್ತಾಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News