ಹೊಸದಿಲ್ಲಿಯಲ್ಲಿ ಅಮರ್ ಸಿಂಗ್ ಅಂತ್ಯಕ್ರಿಯೆ

Update: 2020-08-03 17:04 GMT

ಹೊಸದಿಲ್ಲಿ, ಆ. 4: ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಅವರ ಕುಟುಂಬದ ಸದಸ್ಯರು ಹಾಗೂ ಸಂಬಂಧಿಕರ ಉಪಸ್ಥಿತಿಯಲ್ಲಿ ದಿಲ್ಲಿಯಲ್ಲಿರುವ ಛತಾರ್‌ಪುರ ಚಿತಾಗಾರದಲ್ಲಿ ಸೋಮವಾರ ನೆರವೇರಿಸಲಾಯಿತು.

ಅಂತಿಮ ವಿಧಿ ವಿಧಾನದ ಸಂದರ್ಭ ಅಮರ್ ಸಿಂಗ್ ಅವರ ಪತ್ನಿ ಪಂಕಜ್ ಸಿಂಗ್ ಹಾಗೂ ಪುತ್ರಿಯರು ಉಪಸ್ಥಿತರಿದ್ದರು. ಪುತ್ರಿಯರು ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದರು. ಕೊರೋನ ಶಿಷ್ಟಾಚಾರದ ಹಿನ್ನೆಲೆಯಲ್ಲಿ ನಿಗದಿತ ಸಂಖ್ಯೆಯಲ್ಲಿ ಜನರು ಹಾಜರಾಗಿದ್ದರು.

ಬೆಳಗ್ಗೆ ಛಾತರ್‌ಪುರ ಫಾಮರ್ ಹೌಸ್‌ನಲ್ಲಿ ಅಮರ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಪುಷ್ಪ ನಮನ ಸಲ್ಲಿಸಿದ ಗಣ್ಯರಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಬಿಜೆಪಿಯ ರಾಜ್ಯ ಸಭಾ ಸದಸ್ಯ ಜ್ಯೋತಿರಾದಿತ್ಯ ಸಿಂದಿಯಾ ಹಾಗೂ ಜಯಪ್ರದಾ ಸೇರಿದ್ದಾರೆ.

64ರ ಹರೆಯದ ಅಮರ್ ಸಿಂಗ್ ಕಳೆದ 6 ತಿಂಗಳಿಂದ ಸಿಂಗಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. 2013ರಲ್ಲಿ ಅವರು ಕಿಡ್ನಿ ಕಸಿಗೆ ಒಳಗಾಗಿದ್ದರು. ಅವರು ಸಿಂಗಪುರದಲ್ಲಿ ಶನಿವಾರ ಮೃತಪಟ್ಟಿದ್ದರು. ರವಿವಾರ ಸಂಜೆ ಅವರ ಮೃತದೇಹವನ್ನು ಭಾರತಕ್ಕೆ ತರಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News