ಯುಎಸ್ ಓಪನ್‌ನಲ್ಲಿ ಭಾಗವಹಿಸುವ ಕುರಿತು ಇನ್ನೂ ಗೊಂದಲದಲ್ಲಿದ್ದೇನೆ: ಝ್ವೆರೆವ್

Update: 2020-08-03 18:32 GMT

ನ್ಯೂಯಾರ್ಕ್, ಆ.3: ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಯುಎಸ್ ಓಪನ್‌ನಲ್ಲಿ ಆಡಲು ನ್ಯೂಯಾರ್ಕ್‌ಗೆ ಪ್ರಯಾಣಿಸುವ ಕುರಿತಂತೆ ನಾನು ಇನ್ನೂ ಗೊಂದಲದಲ್ಲಿದ್ದೇನೆ ಎಂದು ವಿಶ್ವದ ನಂ.7ನೇ ಆಟಗಾರ ಅಲೆಕ್ಸಾಂಡರ್ ಝ್ವೆರೆವ್ ಹೇಳಿದ್ದಾರೆ.

ವಿಶ್ವದ ನಂ.1 ಆಟಗಾರ್ತಿ ಅಶ್ ಬಾರ್ಟಿ ಹಾಗೂ ಆಸ್ಟ್ರೇಲಿಯದ ಆಟಗಾರ ನಿಕ್ ಕಿರ್ಗಿಯೊಸ್ ಆಗಸ್ಟ್ 31ರಿಂದ ಆರಂಭವಾಗಲಿರುವ ಹಾರ್ಡ್‌ಕೋರ್ಟ್ ಗ್ರಾನ್‌ಸ್ಲಾಮ್‌ನಲ್ಲಿ ಆಡುವುದಿಲ್ಲ ಎಂದು ಹೇಳಿದ್ದಾರೆ.

‘‘ಯುಎಸ್ ಓಪನ್‌ನಲ್ಲಿ ಭಾಗವಹಿಸುವ ಕುರಿತಂತೆ ನಾನು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ’’ ಎಂದು ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಮೊದಲ ಬಾರಿ ಸೆಮಿ ಫೈನಲ್ ತಲುಪಿರುವ ಝ್ವೆರೆವ್ ಹೇಳಿದ್ದಾರೆ.

‘‘ಅಮೆರಿಕದ ಈಗಿನ ಪರಿಸ್ಥಿತಿ ಚೆನ್ನಾಗಿಲ್ಲ. ನನ್ನ ತಂಡ ಏನು ನಿರ್ಧಾರ ಕೈಗೊಳ್ಳುವುದೆಂದು ನನಗೆ ಗೊತ್ತಿಲ್ಲ. ನಾನು ಟೂರ್ನಮೆಂಟ್‌ನಲ್ಲಿ ಆಡಲು ಬಯಸಿದ್ದೆ’’ಎಂದು 23ರ ಹರೆಯದ ಝ್ವೆರೆವ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News