ಮಾರಿಶಸ್: ಸರಕು ಹಡಗಿನಿಂದ ತೈಲ ಸೋರಿಕೆ; ತುರ್ತು ಪರಿಸ್ಥಿತಿ ಘೋಷಣೆ

Update: 2020-08-08 16:38 GMT

ಪೋರ್ಟ್ ಲೂಯಿಸ್ (ಮಾರಿಶಸ್), ಆ. 8: ಮಾರಿಶಸ್ ದೇಶದ ಪ್ರಧಾನಿ ಪ್ರವಿಂಡ್ ಜಗನ್ನಾಥ್ ಪರಿಸರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ಹಾಗೂ ಸಮುದ್ರದಲ್ಲಿ ಸಿಕ್ಕಿ ಹಾಕಿಕೊಂಡಿರುವ ಸರಕು ಹಡಗಿನಿಂದ ನಿರಂತರವಾಗಿ ದ್ವೀಪ ರಾಷ್ಟ್ರದ ಸಂರಕ್ಷಿತ ಜಲಪ್ರದೇಶಕ್ಕೆ ಸೋರಿಕೆಯಾಗುವುದನ್ನು ತಡೆಯಲು ತುರ್ತು ನೆರವು ನೀಡುವಂತೆ ಫ್ರಾನ್ಸ್‌ಗೆ ಮನವಿ ಮಾಡಿದ್ದಾರೆ.

‘ಎಂವಿ ವಕಶಿಯೊ’ ಎಂಬ ಸರಕು ಹಡಗು ಎರಡು ವಾರಗಳ ಹಿಂದೆ ಮಾರಿಶಸ್ ದ್ವೀಪದ ಸಮೀಪ ಸಮುದ್ರ ತಳಕ್ಕೆ ಒರೆಸಿಕೊಂಡು ನಿಂತಿದೆ. ಈಗ ಅದರಿಂದ ಸೋರಿಕೆಯಾಗುತ್ತಿರುವ ತೈಲವು ಸಮುದ್ರದ ಪರಿಶುದ್ಧ ನೀರನ್ನು ಮಲಿನಗೊಳಿಸುತ್ತಿದೆ.

‘‘ಪರಿಸರ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ’’ ಎಂದು ಪ್ರಧಾನಿ ಪ್ರವಿಂಡ್ ಜಗನ್ನಾಥ್ ಶುಕ್ರವಾರ ತಡರಾತ್ರಿ ಟ್ವೀಟ್ ಮಾಡಿದ್ದಾರೆ.

ಜಪಾನ್ ಕಂಪೆನಿಯೊಂದಕ್ಕೆ ಸೇರಿದ, ಆದರೆ ಪನಾಮ ಸೇವೆಯಲ್ಲಿರುವ ತೈಲ ಟ್ಯಾಂಕರ್ 3,800 ಟನ್ ಇಂಧನವನ್ನು ಒಯ್ಯುತ್ತಿತ್ತು. ಅದು ಬ್ಲೂ ಬೇ ಮರೀನ್ ಪಾರ್ಕ್‌ನ ಜಲಪ್ರದೇಶದ ಸಮೀಪದ ಅಂತರ್‌ರಾಷ್ಟ್ರೀಯ ಮಾನ್ಯತೆಯ ಸಂರಕ್ಷಿತ ಪ್ರದೇಶವಾಗಿರುವ ಪಾಯಿಂಟ್ ಡಿ’ಎಸ್ನಿಯಲ್ಲಿ ಹವಳದ ದಿಬ್ಬವೊಂದಕ್ಕೆ ಢಿಕ್ಕಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News