“ಮೋದಿಯನ್ನು ಟೀಕಿಸಿದರೆ ರಾಹುಲ್ ಕನ್ವಲ್ ಗೆ ಬೇಜಾರಾಗುತ್ತೆ”

Update: 2020-08-09 17:41 GMT

ಹೊಸದಿಲ್ಲಿ: ‘ಇಂಡಿಯಾ ಟುಡೆ’ ಚಾನೆಲ್ ನಡೆಸಿದ್ದ ಮೂಡ್ ಆಫ್ ದಿ ನೇಶನ್ ಸಮೀಕ್ಷೆಯ ಪ್ಯಾನೆಲ್ ಚರ್ಚೆಯ ವೇಳೆ ಆ್ಯಂಕರ್ ರಾಹುಲ್ ಕನ್ವಲ್ ವಿರುದ್ಧ ಕಾಂಗ್ರೆಸ್ ವಕ್ತಾರ ಪವನ್ ಖೇರಾ ಆಕ್ರೋಶ ವ್ಯಕ್ತಪಡಿಸಿರುವ ವಿಡಿಯೋ ವೈರಲ್ ಆಗುತ್ತಿದೆ.

ಪ್ಯಾನೆಲ್ ಚರ್ಚೆಯಲ್ಲಿ ಮೋದಿ ಸರಕಾರವನ್ನು ಟೀಕಿಸಿದ್ದ ಖೇರಾ, “ಮೋದಿ ಸರಕಾರ ಯಶಸ್ವಿಯಾಗಿ ಇವೆಂಟ್ ಮ್ಯಾನೇಜ್ ಮೆಂಟ್, ಹೆಡ್ ಲೈನ್ ಮ್ಯಾನೇಜ್ ಮೆಂಟ್ (ಮಾಧ್ಯಮಗಳ ನಿಯಂತ್ರಣ) ನಡೆಸುತ್ತಿದೆ. ಇವೆರಡನ್ನು ವಿಪಕ್ಷಗಳು ನಿಯಂತ್ರಿಸಲು ಸಾಧ್ಯವಿಲ್ಲ” ಎಂದರು. ಈ ಸಂದರ್ಭ ಪ್ರತಿಕ್ರಿಯಿಸಿದ  ರಾಹುಲ್ ಕನ್ವಲ್, ಹಾಗಾದರೆ ಭಾರತದ ಮತದಾರರು ಮೂರ್ಖರು ಎಂದು ಹೇಳುತ್ತಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ತಿರುಗೇಟು ನೀಡಿದ ಖೇರಾ, “ ನನ್ನ ಮಾತುಗಳಿಂದ ರಾಹುಲ್ ಕನ್ವಲ್  ಗೆ ಬೇಜಾರಾಗಿದೆ ಅಂದುಕೊಳ್ಳುತ್ತೇನೆ.  ನಾನು ಮೋದಿಯನ್ನು ಪ್ರಶ್ನಿಸಿದರೆ ರಾಹುಲ್ ಕನ್ವಲ್  ನನ್ನ ಮೇಲೆ ವೈಯಕ್ತಿಕ ದಾಳಿ ನಡೆಸುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಚರ್ಚೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವು ಖೇರಾ ಮಾತುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News