ದೇಶದಲ್ಲಿ ಒಂದೇ ದಿನ ಸಾವಿರಕ್ಕೂ ಅಧಿಕ ಕೋವಿಡ್ ಸೋಂಕಿತರು ಬಲಿ

Update: 2020-08-10 03:52 GMT

ಹೊಸದಿಲ್ಲಿ : ದೇಶದಲ್ಲಿ ರವಿವಾರ ಒಂದೇ ದಿನ ಸಾವಿರಕ್ಕೂ ಅಧಿಕ ಕೊರೋನ ಸೋಂಕಿತರು ಮೃತಪಟ್ಟಿದ್ದು, ಮಾರ್ಚ್‌ನಲ್ಲಿ ಭಾರತದಲ್ಲಿ ಸೋಂಕು ಕಾಣಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಇಷ್ಟೊಂದು ಸಂಖ್ಯೆಯಲ್ಲಿ ಕೋವಿಡ್ ಸೋಂಕಿತರು ಕೊನೆಯುಸಿರೆಳೆದಿದ್ದಾರೆ.

ರವಿವಾರ 63,851 ಹೊಸ ಪ್ರಕರಣಗಳು ವರದಿಯಾಗಿದ್ದು ಒಂದು ವಾರದಲ್ಲಿ ನಾಲ್ಕು ಲಕ್ಷಕ್ಕೂ ಅಧಿಕ ಪ್ರಕರಣಗಳು ಸೇರ್ಪಡೆಯಾಗಿವೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 22,14,269ಕ್ಕೇರಿದೆ. ಈ ಮಧ್ಯೆ ಗುಣಮುಖರಾದವರ ಸಂಖ್ಯೆ 15,30,070ಕ್ಕೇರಿದ್ದು, ಶೇಕಡ 69ರಷ್ಟು ಸೋಂಕಿತರು ಚೇತರಿಸಿಕೊಂಡಿದ್ದಾರೆ.

ರವಿವಾರ ಆಂಧ್ರಪ್ರದೇಶದಲ್ಲಿ 10,820 ಹೊಸ ಪ್ರಕರಣಗಳು ವರದಿಯಾಗಿದ್ದು, 97 ಮಂದಿ ಮೃತಪಟ್ಟಿದ್ದಾರೆ. ಇದು ರಾಜ್ಯದಲ್ಲಿ ಇದುವರೆಗಿನ ಗರಿಷ್ಠ ದಾಖಲೆಯಾಗಿದೆ. ಮಹಾರಾಷ್ಟ್ರದಲ್ಲಿ 12,248 ಹೊಸ ಪ್ರಕರಣಗಳು ದಾಖಲಾಗಿದ್ದು, ಶನಿವಾರದ ಸಂಖ್ಯೆ (12822)ಯನ್ನು ಹೊರತುಪಡಿಸಿದರೆ ಇದು ಎರಡನೇ ಗರಿಷ್ಠ ಸಂಖ್ಯೆಯಾಗಿದೆ.

ದೇಶದಲ್ಲಿ ಒಂದು ವಾರದಲ್ಲಿ 6,279 ಮಂದಿ ಸೋಂಕಿಗೆ ಬಲಿಯಾಗಿದ್ದು, ಕಳೆದ ವಾರ ವಿಶ್ವದಲ್ಲೇ ಬ್ರೆಝಿಲ್ ಹಾಗೂ ಅಮೆರಿಕವನ್ನು ಹೊರತುಪಡಿಸಿ, ಗರಿಷ್ಠ ಸಾವಿನ ಪ್ರಕರಣಗಳು ಭಾರತದಲ್ಲಿ ವರದಿಯಾಗಿವೆ. ಭಾರತದಲ್ಲಿ ರವಿವಾರ 1007 ಮಂದಿ ಸೋಂಕಿತರು ಮೃತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News