11 ಅಮೆರಿಕನ್ನರ ವಿರುದ್ಧ ಚೀನಾ ದಿಗ್ಬಂಧನ

Update: 2020-08-10 18:00 GMT

ಬೀಜಿಂಗ್, ಆ. 10: ಹಾಂಕಾಂಗ್‌ನಲ್ಲಿ ಪ್ರಜಾಪ್ರಭುತ್ವ ಪರ ಹೋರಾಟಗಾರರ ವಿರುದ್ಧದ ದಮನ ಕಾರ್ಯಾಚರಣೆಯನ್ನು ಖಂಡಿಸಿ ಹಾಂಕಾಂಗ್ ಅಧಿಕಾರಿಗಳ ಮೇಲೆ ಅಮೆರಿಕ ಇತ್ತೀಚೆಗೆ ವಿಧಿಸಿರುವ ದಿಗ್ಬಂಧನಗಳಿಗೆ ಪ್ರತಿಯಾಗಿ, ಚೀನಾವು 11 ಅಮೆರಿಕನ್ನರ ವಿರುದ್ಧ ಸೋಮವಾರ ದಿಗ್ಬಂಧನಗಳನ್ನು ವಿಧಿಸಿದೆ.

ಅಮೆರಿಕವು ಇತ್ತೀಚೆಗೆ ಹಾಂಕಾಂಗ್ ಆಡಳಿತಾಧಿಕಾರಿ ಕ್ಯಾರೀ ಲ್ಯಾಮ್ ಸೇರಿದಂತೆ ಅಲ್ಲಿನ 11 ಅಧಿಕಾರಿಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಿತ್ತು. ಅವರು ಅಮೆರಿಕದಲ್ಲಿ ಹೊಂದಿರುವ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಾಗಿ ಹೇಳಿತ್ತು.

''ಹಾಂಕಾಂಗ್ ಸಂಬಂಧಿತ ವಿಚಾರದಲ್ಲಿ ಕೆಟ್ಟದಾಗಿ ವರ್ತಿಸಿರುವ ಕೆಲವರ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಚೀನಾ ನಿರ್ಧರಿಸಿದೆ'' ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಝಾವೊ ಲಿಜಿಯನ್ ಸೋಮವಾರ ಹೇಳಿದರು.

ಚೀನಾದ ದಿಗ್ಬಂಧನ ಪಟ್ಟಿಯಲ್ಲಿ ರಿಪಬ್ಲಿಕನ್ ಪಕ್ಷದ ಸೆನೆಟರ್‌ಗಳಾದ ಮಾರ್ಕೊ ರೂಬಿಯೊ ಮತ್ತು ಟೆಡ್ ಕ್ರೂಝ್ ಇದ್ದಾರೆ. ಅವರ ಜೊತೆಗೆ, ಹ್ಯೂಮನ್ ರೈಟ್ಸ್ ವಾಚ್‌ನ ನಿರ್ದೇಶಕ ಕೆನೆತ್ ರಾತ್ ಮತ್ತು ನ್ಯಾಶನಲ್ ಎಂಡೋಮೆಂಟ್ ಫಾರ್ ಡೆಮಾಕ್ರಸಿ ಎಂಬ ಸಂಘಟನೆಯ ಅಧ್ಯಕ್ಷ ಕಾರ್ಲ್ ಗರ್ಶ್‌ಮನ್ ದಿಗ್ಬಂಧಿತರ ಪಟ್ಟಿಯಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News