ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 22.68 ಲಕ್ಷಕ್ಕೆ ಏರಿಕೆ

Update: 2020-08-11 05:16 GMT

ಹೊಸದಿಲ್ಲಿ, ಆ.11: ಕಳೆದ 24 ಗಂಟೆಗಳ ಅವಧಿಯಲ್ಲಿ 53,601 ಹೊಸ ಕೊರೋನ ವೈರಸ್ ಕೇಸ್‌ಗಳು ವರದಿಯಾಗಿದೆ. ಈ ಮೂಲಕ ಭಾರತದಲ್ಲಿ ಕೊರೋನ ಸೋಂಕಿತರ ಸಂಖ್ಯೆ 22,68,675ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ ಬೆಳಗ್ಗೆ ತಿಳಿಸಿದೆ.

ಭಾರತದಲ್ಲಿ ಸತತ ಏಳನೇ ದಿನ ಅಮೆರಿಕ ಹಾಗೂ ಬ್ರೆಝಿಲ್‌ಗಳಿಗಿಂತ ಹೆಚ್ಚಿನ ಸಂಖ್ಯೆಯ ದೈನಂದಿನ ಕೇಸ್‌ಗಳು ವರದಿಯಾಗಿದೆ. ವಿಶ್ವದ ಅತ್ಯಂತ ಹೆಚ್ಚು ಕೊರೋನ ಸೋಂಕು ಪೀಡಿತ ದೇಶಗಳ ಪಟ್ಟಿಯಲ್ಲಿ ಅಮೆರಿಕ ಹಾಗೂ ಬ್ರೆಝಿಲ್ ಮೊದಲೆರಡು ಸ್ಥಾನದಲ್ಲಿದ್ದರೆ, ಭಾರತ 3ನೇ ಸ್ಥಾನದಲ್ಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News