ಐಎಸ್ಎಫ್ ನಿಂದ ಸೌದಿ ಅರೇಬಿಯದಲ್ಲಿ ಸ್ವಾತಂತ್ರ್ಯ ದಿನಾಚರಣೆ

Update: 2020-08-19 09:30 GMT

ರಿಯಾದ್, ಆ.19: ದೇಶದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಇಂಡಿಯನ್ ಸೋಶಿಯಲ್ ಫೋರಮ್(ಐ.ಎಸ್.ಎಫ್.) ಕರ್ನಾಟಕ ರಾಜ್ಯ ಚಾಪ್ಟರ್ ಸೌದಿ ಅರೇಬಿಯಾದ ವಿವಿಧ ಪ್ರಾಂತ್ಯಗಳಲ್ಲಿ ವೆಬಿನಾರ್ ನಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಆಚರಿಸಲಾಯಿತು.

ಜಿದ್ದಾ: ಐ.ಎಸ್.ಎಫ್. ಜಿದ್ದಾ ಪ್ರಾಂತ್ಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಗತಿಪರ ಚಿಂತಕ, ಪತ್ರಕರ್ತ ಹರ್ಷ ಕುಮಾರ್ ಕುಗ್ವೆ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಸ್ವಾತಂತ್ರ್ಯದ ಸಂದೇಶ ನೀಡುವುದರ ಜತೆಗೆ ಪ್ರಸಕ್ತ ರಾಜಕೀಯ ಮತ್ತು ಸ್ವಾತಂತ್ರ್ಯ ಎಂಬ ವಿಷಯದಲ್ಲಿ ವಿಚಾರ ಮಂಡಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಐಎಸ್ಎಫ್ ಜಿದ್ದಾ ಅಧ್ಯಕ್ಷ ಕಲಂದರ್ ಸೂರಿಂಜೆ ವಹಿಸಿದ್ದರು. ಕಾರ್ಯದರ್ಶಿ ರಫೀಕ್ ಬಿಜೈ ಕಾರ್ಯಕ್ರಮ ನಿರೂಪಿಸಿದರು.

ದಮ್ಮಾಮ್: ಐ.ಎಸ್.ಎಫ್. ದಮ್ಮಾಮ್ ಪ್ರಾಂತ್ಯ ಆಯೋಜಿಸಿದ ವೆಬಿನಾರ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೌದಾ ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಅಭಿಜಿತ್ ವರ್ಗೀಸ್,  ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ನೀಡಿದರು. ಇದೇ ಮಕ್ಕಳ ಛದ್ಮ ವೇಷ ಸ್ಪರ್ಧೆ ನಡೆಯಿತು. ದಮ್ಮಾಮ್ ಐಎಸ್ ಎಫ್ ಅಧ್ಯಕ್ಷ  ಶರೀಫ್ ಜೋಕಟ್ಟೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ರಿಯಾದ್: ಐ.ಎಸ್.ಎಫ್. ರಿಯಾದ್ ವತಿಯಿಂದ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ವೆಬಿನಾರ್ ನಲ್ಲಿ ಕಾರ್ಯಕ್ರಮ ಆಯೋಜಿಸುವ ಮೂಲಕ ಆಚರಿಸಲಾಯಿತು. ಕಾರ್ಯಕ್ರಮವನ್ನು ಐ.ಎಸ್.ಎಫ್. ರಿಯಾದ್ ಕೇಂದ್ರೀಯ ಸಮಿತಿಯ ಅಧ್ಯಕ್ಷ ಮುಹಮ್ಮದ್ ಹಾರಿಸ್ ಉದ್ಘಾಟಿಸಿದರು. ಐ.ಎಸ್.ಎಫ್. ರಾಜ್ಯ ಸಮಿತಿ ಸದಸ್ಯ ತಾಜುದ್ದೀನ್ ಪುತ್ತೂರು ಸ್ವಾತಂತ್ರ್ಯೋತ್ಸವದ ಸಂದೇಶ ನೀಡಿದರು.

ಐ ಎಸ್ ಎಫ್ ರಿಯಾದ್ ಪ್ರಾಂತ್ಯ ಅಧ್ಯಕ್ಷ ಸಾಬಿತ್ ಬಜ್ಪೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಜುಬೈಲ್: ನಮ್ಮ ದೇಶ ನಮ್ಮ ಹೆಮ್ಮೆ ಎಂಬ ಘೋಷ ವಾಕ್ಯದೊಂದಿಗೆ ಜುಬೈಲ್ ಐ.ಎಸ್.ಎಫ್. ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿತು.

ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಮಜೀದ್ ಮೈಸೂರು ಸ್ವಾತಂತ್ರ್ಯ ದಿನದ ಸಂದೇಶ ಮತ್ತು ಪ್ರಚಲಿತ ವಿದ್ಯಮಾನಗಳ ಕುರಿತು ಮಾತನಾಡಿದರು.

ಇದೇವೇಳೆ ಮಕ್ಕಳಿಗೆ ರಾಷ್ಟ್ರ ನಾಯಕರ ಛದ್ಮವೇಷ ಸ್ಪರ್ಧೆ ಮತ್ತು ದೇಶ ಭಕ್ತಿ ಗೀತಿಗಳನ್ನು ಏರ್ಪಡಿಸಲಾಗಿತ್ತು. ಇಂಡಿಯನ್ ಸೋಶಿಯಲ್ ಫೋರಮ್ ಜುಬೈಲ್ ಪ್ರಾಂತ್ಯ ಅಧ್ಯಕ್ಷ ಫಿರೋಝ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು.

ಅಸೀರ್: ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಐ.ಎಸ್.ಎಫ್. ವತಿಯಿಂದ 74ನೇ ಸ್ವಾತಂತ್ರ್ಯ ದಿನದಾಚರಣೆಯನ್ನು ವೆಬಿನಾರ್ ಮೂಲಕ ಆಚರಿಸಲಾಯಿತು.

ಕಾರ್ಯಕ್ರಮ ವನ್ನು ಇಂಡಿಯಾ ಫ್ರಟರ್ನಿಟಿ ಫೋರಮ್ ಅಸೀರ್ ಘಟಕದ ಅಧ್ಯಕ್ಷ ಇಕ್ಬಾಲ್ ಕಾವೂರು ಉದ್ಘಾಟಿಸಿದರು. ಜಿದ್ದಾದ ಐ.ಎಸ್.ಎಫ್. ರಾಜ್ಯ ಸಮಿತಿ ಸದಸ್ಯ ಅಬ್ದುಲ್ ಮಜೀದ್ ತಬೂಕ್ ಸ್ವಾತಂತ್ರ್ಯ ದಿನಾಚರಣೆಯ ಸಂದೇಶ ಭಾಷಣ ಮಾಡಿದರು.

ಇಂಡಿಯಾ ಫ್ರಟರ್ನಿಟಿ ಫೋರಮ್ ಜಿಝನ್ ಅಧ್ಯಕ್ಷ ಸಲೀಂ ಗುರುವಾಯನಕೆರೆ ಶುಭ ಹಾರೈಸಿದರು.

ಅಸೀರ್ ಪ್ರಾಂತ್ಯ ಅಧ್ಯಕ್ಷ ಹನೀಫ್ ಮಂಜೇಶ್ವರ  ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News