ಮೆಟ್ರೋ ಕಾಮಗಾರಿಯ ಬ್ಯಾರಿಕೇಡ್ ಬಿದ್ದು ಬೈಕ್‍ ಸವಾರನಿಗೆ ಗಂಭೀರ ಗಾಯ

Update: 2020-08-20 12:53 GMT

ಬೆಂಗಳೂರು, ಆ.20: ನಮ್ಮ ಮೆಟ್ರೋ ಕಾಮಗಾರಿಯ ಬ್ಯಾರಿಕೇಡ್‍ಗಳು ಏಕಾಏಕಿ ಉರುಳಿ ಬಿದ್ದ ಪರಿಣಾಮ ಬೈಕ್‍ನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಗಂಭೀರ ಗಾಯವಾಗಿರುವ ಘಟನೆ ಇಲ್ಲಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಪ್ರದೀಪ್ ಕುಮಾರ್ ಎಂಬುವರು ಇಲ್ಲಿನ ಡೈರಿ ಸರ್ಕಲ್ ಕಡೆಯಿಂದ ಬನ್ನೇರುಘಟ್ಟ ಮಾರ್ಗವಾಗಿ ಬೈಕ್‍ನಲ್ಲಿ ತೆರಳುತ್ತಿದ್ದರು. ಈ ವೇಳೆ ಮೆಟ್ರೋ ಕಾಮಗಾರಿಗಾಗಿ ನಿಲ್ಲಿಸಲಾಗಿದ್ದ ಹನ್ನೆರಡು ಬ್ಯಾರಿಕೇಡ್‍ಗಳು ಏಕಾಏಕಿ ರಸ್ತೆಗೆ ಬಿದ್ದಿದ್ದು, ಘಟನೆಯಲ್ಲಿ ಪ್ರದೀಪ್ ಕಾಲಿಗೆ ಗಂಭೀರ ಗಾಯವಾಗಿದೆ ಎನ್ನಲಾಗಿದೆ.

ಗಾಯಾಳು ಪ್ರದೀಪ್ ಕುಮಾರ್ ಖಾಸಗಿ ಶಾಲೆಯೊಂದರಲ್ಲಿ ಉದ್ಯೋಗಿಯಾಗಿದ್ದು, ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News