5 ಮಂದಿ ನುಸುಳುಕೋರರನ್ನು ಗುಂಡಿಕ್ಕಿ ಹತ್ಯೆಗೈದ ಬಿಎಸ್‍ಎಫ್ ಯೋಧರು

Update: 2020-08-22 13:35 GMT

ಹೊಸದಿಲ್ಲಿ: ಪಂಜಾಬ್ ರಾಜ್ಯದ ವ್ಯಾಪ್ತಿಯಲ್ಲಿ ಬರುವ ಭಾರತ-ಪಾಕ್ ಗಡಿ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದ ಎನ್‍ ಕೌಂಟರ್‍ ನಲ್ಲಿ ಐದು ಮಂದಿ ನುಸುಳುಕೋರರನ್ನು ಗಡಿ ಭದ್ರತಾ ಪಡೆಯ ಯೋಧರು ಗುಂಡಿಕ್ಕಿ ಹತ್ಯೆಗೈದಿದ್ದಾರೆ.

ತರಣ್ ತರಣ್ ಜಿಲ್ಲೆಯ ಖೇಂಖರನ್ ಗಡಿ ಮೂಲಕ ಇವರು ಭಾರತಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಬಿಎಸ್‍ಎಫ್ ಗಸ್ತು ತಂಡ ಅವರನ್ನು ಗಮನಿಸಿ ಗುಂಡು ಹಾರಿಸಿತ್ತು. ನುಸುಳುಕೋರರನ್ನು ಆರಂಭದಲ್ಲಿ  ನಿಲ್ಲಲು ಸೂಚಿಸಿದಾಗ ಅವರು ಗುಂಡು ಹಾರಿಸಿದ್ದರು. ಗಡಿ ಭದ್ರತಾ ದಳದ ಸಿಬ್ಬಂದಿ ಕೂಡ ಪ್ರತಿ ದಾಳಿ ನಡೆಸಿದ್ದು ಈ ದಾಳಿಯಲ್ಲಿ ಐದು ಮಂದಿ ನುಸುಳುಕೋರರು ಮೃತಪಟ್ಟಿದ್ದಾರೆ.

ಗುರುವಾರ ಮಧ್ಯರಾತ್ರಿಯಿಂದಲೇ ಗಡಿ ಪ್ರದೇಶದಲ್ಲಿ ಕೆಲವೊಂದು ಶಂಕಾಸ್ಪದ ವ್ಯಕ್ತಿಗಳ ಚಲನವಲನಗಳನ್ನು ಗಮನಿಸಿದ್ದ ಬಿಎಸ್‍ಎಫ್ ಯೋಧರು ಹೆಚ್ಚಿನ ನಿಗಾ ವಹಿಸಿ ಕೊನೆಗೆ ಎನ್‍ಕೌಂಟರ್‍ನಲ್ಲಿ ನುಸುಳುಕೋರರನ್ನು ಕೊಂದಿದ್ದಾರೆ. ಅವರೆಲ್ಲರ ಬಳಿ ರೈಫಲ್‍ಗಳಿದ್ದವಲ್ಲದ  ಆ ಗಡಿ ಪ್ರದೇಶದಲ್ಲಿ ಎತ್ತರಕ್ಕೆ ಬೆಳೆದಿದ್ದ ಹುಲ್ಲಿನ ಲಾಭ  ಪಡೆದು ನುಸುಳುವ ಯತ್ನ ನಡೆಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News