ಬೈಕ್‍ ವ್ಹೀಲಿಂಗ್ ಆರೋಪ: 9 ಮಂದಿಯ ಬಂಧನ

Update: 2020-08-31 12:46 GMT

ಬೆಂಗಳೂರು, ಆ.30: ನಗರದ ಹಲವು ರಸ್ತೆಗಳಲ್ಲಿ ಬೈಕ್‍ಗಳ ಮೂಲಕ ವ್ಹೀಲಿಂಗ್ ಮಾಡುತ್ತಿದ್ದ ಆರೋಪದಡಿ 9 ಮಂದಿಯನ್ನು ಬಂಧಿಸಿರುವ ಪಶ್ಚಿಮ ವಿಭಾಗದ ಸಂಚಾರ ಪೊಲೀಸರು, ವಾಹನಗಳನ್ನು ಜಪ್ತಿ ಮಾಡಿದ್ದಾರೆ.

ಮೋಜು ಮಸ್ತಿ ಮಾಡುತ್ತಾ ಇತರ ವಾಹನಗಳಿಗೆ ಕಿರಿಕಿರಿ ಉಂಟು ಮಾಡುತ್ತಾ ಬಸವನಗುಡಿ, ಬ್ಯಾಟರಾಯನಪುರ, ಕೆಂಗೇರಿ, ಬನಶಂಕರಿ ಇನ್ನಿತರ ಕಡೆಗಳ ರಸ್ತೆಗಳಲ್ಲಿ ಬೈಕ್‍ಗಳಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡುತ್ತಿದ್ದ 9 ಮಂದಿಯನ್ನು ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಡಾ.ಸೌಮ್ಯ ಲತಾ ತಿಳಿಸಿದ್ದಾರೆ.

ಅತಿವೇಗ, ಕರ್ಕಶ ಶಬ್ದಗಳಿಂದ ಇತರ ವಾಹನ ಸವಾರರನ್ನು ಬೆಚ್ಚಿ ಬೀಳಿಸುತ್ತಾರೆ. ವ್ಹೀಲಿಂಗ್‍ನಿಂದಾಗಿ ಅಪಘಾತಗಳಾಗಿ ಕೆಲವರು ಸಾವನ್ನಪ್ಪಿದ್ದಾರೆ. ಪೊಲೀಸರು ಎಷ್ಟೇ ಕ್ರಮ ಕೈಗೊಂಡರೂ ವ್ಹೀಲಿಂಗ್ ಕಡಿಮೆಯಾಗುತ್ತಿಲ್ಲ. ರಾತ್ರಿಯಿಡಿ ವ್ಹೀಲಿಂಗ್ ಪಂದ್ಯಗಳು ನಡೆಯುವ ಮಾಹಿತಿಯಿದ್ದು ಕಾರ್ಯಾಚರಣೆ ತೀವ್ರ ಗೊಳಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News