ಬೆಂಗಳೂರಿನಲ್ಲಿ 14 ವರ್ಷಗಳ ನಂತರ ಆಗಸ್ಟ್ ನಲ್ಲಿ ಅತೀ ಕಡಿಮೆ ಮಳೆ

Update: 2020-08-31 14:56 GMT

ಬೆಂಗಳೂರು, ಅ.31: ನಗರದಲ್ಲಿ 14 ವರ್ಷಗಳ ನಂತರ ಆಗಸ್ಟ್ ತಿಂಗಳಿನಲ್ಲಿ ಅತ್ಯಂತ ಕನಿಷ್ಠ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಹವಾಮಾನ ಇಲಾಖೆ, ಬೆಂಗಳೂರು ನಗರ ಪ್ರದೇಶದಲ್ಲಿ 75.9 ಮಿ.ಮೀ ಮಳೆಯಾಗಿದೆ. ಇದು ಕಳೆದ 14 ವರ್ಷಗಳಲ್ಲೇ ಆಗಸ್ಟ್ ತಿಂಗಳಿನ ಅತ್ಯಂತ ಕನಿಷ್ಠ ಮಳೆಯಾಗಿದೆ. ಹೆಚ್‍ಎಎಲ್ ನಲ್ಲಿ 83.8 ಮಿ.ಮೀ ಮಳೆಯಾಗಿದ್ದು, ಕೆಐಎಎಲ್ ನಲ್ಲಿ 56.6 ಮಿ.ಮೀ ಮಳೆಯಾಗಿದೆ ಎಂದು ತಿಳಿಸಿದೆ.

ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಲ್ಲಿ ಸರಾಸರಿ 147 ಮಿ.ಮೀ ಮಳೆಯಾಗುತ್ತಿತ್ತು. ಆದರೆ, ಈ ಬಾರಿ ಕೇವಲ 75.9 ಮಿ.ಮೀ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಆ.30ರಂದು 5 ವರ್ಷಗಳಲ್ಲಿಯೇ ಆಗಸ್ಟ್ ತಿಂಗಳಿನಲ್ಲಿ ಗರಿಷ್ಠ ತಾಪಮಾನ ದಾಖಲಾಗಿದೆ. ಆ.30ರಂದು ನಗರದಲ್ಲಿ 31.6 ಸೆ. ಉಷ್ಣಾಂಶ ದಾಖಲಾಗಿತ್ತು. ಇದು ಕಳೆದ ಐದು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಉಂಟಾದ ಗರಿಷ್ಠ ಉಷ್ಣಾಂಶವಾಗಿದೆ ಎಂದು ಮಾಹಿತಿ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News