ಪಿಜಿ ಕೋರ್ಸ್‌ಗಳಲ್ಲಿ ಗ್ರಾಮಾಂತರ ಸರಕಾರಿ ವೈದ್ಯರಿಗೆ ಮೀಸಲಾತಿ: ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್

Update: 2020-08-31 18:51 GMT

ಹೊಸದಿಲ್ಲಿ,: ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸರಕಾರಿ ವೈದ್ಯರುಗಳಿಗೆ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಮೀಸಲಾತಿ ಖೋಟಾ ನೀಡುವುದಕ್ಕೆ ರಾಜ್ಯ ಸರಕಾರಗಳಿಗೆ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್ ಸೋಮವಾರ ಹೇಳಿದೆ.

 ಸರಕಾರಿ ವೈದ್ಯರುಗಳಿಗೆ ಸ್ನಾತಕೋತ್ತರ ಕೋರ್ಸ್‌ಗಳಲ್ಲಿ ಮೀಸಲಾತಿ ಒದಗಿಸಲು ಶಾಸನ್ಮಾತ ಅಧಿಕಾರವಿದೆಯೆಂದು ನ್ಯಾಯಮೂರ್ತಿ ಅರುಣ್‌ಮಿಶ್ರಾ ನೇತೃತ್ವದ ಐವರು ಸದಸ್ಯರು ಪೀಠವು ತಿಳಿಸಿದೆ.

 ಇಂತಹ ಮೀಸಲಾತಿಯನ್ನು ನಿಷೇಧಿಸಿರುವ ಭಾರತೀಯ ವೈದ್ಯಮಂಡಳಿ (ಎಂಸಿಐ)ಯ ನಿಯಮವು ಏಕಪಕ್ಷೀಯವಾದುದು ಹಾಗೂ ಅಸಂವಿಧಾನಿಕ ಎಂದು ಸುಪ್ರೀಂಕೋರ್ಟ್ ಹೇಳಿದೆ. ಎಂಸಿಐ ಒಂದು ಶಾಸನಾ ಬದ್ಧ ಸಂಸ್ಥೆಯಾಗಿದ್ದು, ಮೀಸಲಾತಿ ನಿಯಮಗಳನ್ನು ರೂಪಿಸಲು ಅಧಿಕಾರವಿಲ್ಲವೆಂದು ನ್ಯಾಯಪೀಠ ತಿಳಿಸಿದೆ.

  ಗ್ರಾಮಾಂತರ ಪ್ರದೇಶಗಳಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಲು ವೈದ್ಯರನ್ನು ಉತ್ತೇಜಿಸುವುದಕ್ಕಾಗಿ ಪಿಜಿ ಕೋರ್ಸ್‌ಗಳಲ್ಲಿ ಮೀಸಲಾತಿ ಸೌಲಭ್ಯ ನೀಡಬೇಕೆಂದು ತಮಿಳುನಾಡು ವೈದ್ಯಕೀಯ ಅಧಿಕಾರಿಗಳ ಸಂಘ ಮತ್ತಿತರರು ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News