ಡಬ್ಲ್ಯುಟಿಎ ರ್ಯಾಂಕಿಂಗ್: 9ನೇ ಸ್ಥಾನಕ್ಕೇರಿದ ಒಸಾಕಾ

Update: 2020-09-01 04:14 GMT

ಪ್ಯಾರಿಸ್: ಸೋಮವಾರ ಬಿಡುಗಡೆಯಾಗಿರುವ ನೂತನ ಡಬ್ಲುಟಿಎ ರ್ಯಾಂಕಿಂಗ್‌ನಲ್ಲಿ ಜಪಾನ್ ಆಟಗಾರ್ತಿ ನವೊಮಿ ಒಸಾಕಾ ಒಂದು ಸ್ಥಾನ ಭಡ್ತಿ ಪಡೆದು 9ನೇ ಸ್ಥಾನಕ್ಕೇರಿದ್ದಾರೆ. ವಾರಾಂತ್ಯದಲ್ಲಿ ವೆಸ್ಟರ್ನ್ ಹಾಗೂ ಸದರ್ನ್ ಓಪನ್ ಫೈನಲ್‌ನಿಂದ ಹಿಂದೆ ಸರಿದಿದ್ದ ಒಸಾಕಾ ಸೋಮವಾರ ಆರಂಭವಾಗಿರುವ ಯು.ಎಸ್.ಓಪನ್ ಗ್ರಾನ್‌ಸ್ಲಾಮ್ ಟೂರ್ನಿಯ ಮೊದಲ ಸುತ್ತಿನಲ್ಲಿ ತಮ್ಮದೇ ದೇಶದ ಇನ್ನೋರ್ವ ಆಟಗಾರ್ತಿ ಮಿಸಾಕಿ ಡೊಯ್ ಅವರನ್ನು ಎದುರಿಸಲಿದ್ದಾರೆ.

 ಒಸಾಕಾ ವೆಸ್ಟರ್ನ್ ಹಾಗೂ ಸದರ್ನ್ ಓಪನ್ ಫೈನಲ್‌ನಿಂದ ಹಿಂದೆ ಸರಿದಿರುವ ಕಾರಣ ವಿಕ್ಟೋರಿಯ ಅಝರೆಂಕಾಗೆ ಪ್ರಶಸ್ತಿಯನ್ನು ಹಸ್ತಾಂತರಿಸಲಾಗಿದೆ. 32 ಸ್ಥಾನ ಏರಿಕೆ ಕಂಡಿರುವ ಅಝರೆಂಕಾ ಅವರು 27ನೇ ಸ್ಥಾನದಲ್ಲಿದ್ದಾರೆ.

  ಆಸ್ಟ್ರೇಲಿಯದ ಅಶ್ಲೆಘ್ ಬಾರ್ಟಿ ಅಗ್ರ ಸ್ಥಾನ ಉಳಿಸಿಕೊಂಡಿದ್ದಾರೆ. ಬಾರ್ಟಿ ಹಾಗೂ ದ್ವಿತೀಯ ಸ್ಥಾನದಲ್ಲಿರುವ ಸಿಮೊನಾ ಹಾಲೆಪ್ ಕೋವಿಡ್-19 ಹಿನ್ನೆಲೆಯಲ್ಲಿ ಪ್ರೇಕ್ಷಕರಿಲ್ಲದೆ ನಡೆಯುತ್ತಿರುವ ಯು.ಎಸ್ ಓಪನ್‌ನಲ್ಲಿ ಭಾಗವಹಿಸುತ್ತಿಲ್ಲ.

ವಿಶ್ವದ ನಂ.3ನೇ ಆಟಗಾರ್ತಿ ಕರೊಲಿನಾ ಪ್ಲಿಸ್ಕೋವಾ ವರ್ಷದ ಎರಡನೇ ಗ್ರಾನ್‌ಸ್ಲಾಮ್ ಟೂರ್ನಿ ಯು.ಎಸ್. ಓಪನ್ ಟೂರ್ನಿಯಲ್ಲಿ ಗರಿಷ್ಠ ರ್ಯಾಂಕಿನ ಆಟಗಾರ್ತಿಯಾಗಿ ಹೊರಹೊಮ್ಮಿದ್ದಾರೆ. 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಬೇಟೆಯಲ್ಲಿರುವ 38ರ ವಯಸ್ಸಿನ ಸೆರೆನಾ ವಿಲಿಯಮ್ಸ್ ಒಂದು ಸ್ಥಾನ ಭಡ್ತಿ ಪಡೆದು 8ನೇ ಸ್ಥಾನಕ್ಕೇರಿದ್ದಾರೆ.

ಡಬ್ಲುಟಿಎ ರ್ಯಾಂಕಿಂಗ್: 1.ಅಶ್ಲೆ ಬಾರ್ಟಿ(ಆಸ್ಟ್ರೇಲಿಯ), 2. ಸಿಮೊನಾ ಹಾಲೆಪ್(ರೊಮಾನಿಯಾ), 3. ಕರೊಲಿನಾ ಪ್ಲಿಸ್ಕೋವಾ(ಝೆಕ್), 4. ಸೋಫಿಯಾ ಕೆನಿನ್(ಅಮೆರಿಕ), 5. ಎಲಿನಾ ಸ್ವಿಟೋಲಿನಾ(ಉಕ್ರೇನ್), 6. ಬಿಯಾಂಕಾ ಆ್ಯಂಡ್ರೀಸ್ಕೂ(ಕೆನಡಾ), 7. ಕಿಕಿ ಬೆರ್ಟೆನ್ ್ಸ (ಹಾಲೆಂಡ್), 8. ಸೆರೆನಾ ವಿಲಿಯಮ್ಸ್(ಅಮೆರಿಕ), 9. ನವೊಮಿ ಒಸಾಕಾ(ಜಪಾನ್), 10. ಬೆಲಿಂಡಾ ಬೆನ್ಸಿಕ್(ಸ್ವಿಸ್).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News