ತನ್ನ ಜೊತೆ ಭಾರತ ನಿಲ್ಲುವುದು ಅಮೆರಿಕಕ್ಕೆ ಅಗತ್ಯ: ಅಮೆರಿಕ ರಾಜತಾಂತ್ರಿಕ

Update: 2020-09-01 14:27 GMT

ವಾಶಿಂಗ್ಟನ್, ಸೆ. 1: ತನ್ನ ‘ಮುಕ್ತ ಭಾರತ-ಪೆಸಿಫಿಕ್ ವಲಯ’ ತಂತ್ರಗಾರಿಕೆಯ ಯಶಸ್ಸಿಗಾಗಿ ತನ್ನ ಜೊತೆಗೆ ಭಾರತ ನಿಲ್ಲುವುದು ಅಮೆರಿಕಕ್ಕೆ ಅಗತ್ಯವಾಗಿದೆ ಎಂದು ಅಮೆರಿಕದ ಉಪ ವಿದೇಶ ಕಾರ್ಯದರ್ಶಿ ಸ್ಟೀಫನ್ ಬೈಗನ್ ಹೇಳಿದ್ದಾರೆ. ‘ಕ್ವಾಡ್’ (ಅಮೆರಿಕ, ಜಪಾನ್, ಆಸ್ಟ್ರೇಲಿಯ ಮತ್ತು ಭಾರತವನ್ನೊಳಗೊಂಡ ದೇಶಗಳ ಒಕ್ಕೂಟ) ಕಲ್ಪನೆಯು ವಿಸ್ತೃತ ಭಾರತ-ಪೆಸಿಫಿಕ್ ವೇದಿಕೆಯಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲು ಭಾರತಕ್ಕೆ ನೆರವು ನೀಡಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೂತನ ಭಾರತ-ಪೆಸಿಫಿಕ್ ತಂತ್ರಗಾರಿಕೆಯು ಆಧುನಿಕ ಜಗತ್ತಿನ ವಾಸ್ತವತೆಗಳ ಅಗತ್ಯವಾಗಿದೆ ಹಾಗೂ ಅದು ಪ್ರಜಾಪ್ರಭುತ್ವಗಳು, ಮುಕ್ತ ಮಾರುಕಟ್ಟೆಗಳು ಮತ್ತು ಭಾರತ ಮತ್ತು ಅದರ ಜನತೆ ಹಾಗೂ ಅಮೆರಿಕ ಮತ್ತು ಅದರ ಜನತೆ ಹೊಂದಿರುವ ಸಮಾನ ವೌಲ್ಯಗಳನ್ನು ಆಧರಿಸಿದೆ ಎಂದು ಬೈಗನ್ ನುಡಿದರು.

ಅವರು ಮೂರನೇ ಭಾರತ ಅಮೆರಿಕ ನಾಯಕತ್ವ ಶೃಂಗಸಮ್ಮೇಳನದ ಅಮೆರಿಕ-ಭಾರತ ರಕ್ಷಣಾ ವೇದಿಕೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

ಭಾರತ-ಅಮೆರಿಕ ರಕ್ಷಣಾ ಮತ್ತು ಭಾಗೀದಾರಿಕೆ ವೇದಿಕೆಯು ಶೃಂಗಸಮ್ಮೇಳನವನ್ನು ಏರ್ಪಡಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News