ಸಿಎಸ್‌ಕೆ ಶಿಬಿರದಲ್ಲಿ ನೀವು ನನ್ನನ್ನು ಮತ್ತೆ ನೋಡಬಹುದು: ರೈನಾ

Update: 2020-09-02 18:56 GMT

ಹೊಸದಿಲ್ಲಿ: ಐಪಿಎಲ್‌ನಿಂದ ಅನಿರೀಕ್ಷಿತವಾಗಿ ಹೊರಗುಳಿದಿರುವ ಬಗ್ಗೆ ಸುರೇಶ್ ರೈನಾ ಮೌನ ಮುರಿದಿದ್ದಾರೆ ಅವರು ಕೌಟುಂಬಿಕ ಕಾರಣಕ್ಕಾಗಿ ಭಾರತಕ್ಕೆ ಮರಳಿದ್ದಾರೆ ಮತ್ತು ಸೆಪ್ಟಂಬರ್ 19ರಿಂದ ಆರಂಭವಾಗಲಿರುವ ಪಂದ್ಯಾವಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಮತ್ತೆ ಸೇರಲು ತಾನು ದುಬೈಗೆ ವಾಪಸಾಗಬಹುದು ಎಂದು ಹೇಳಿದ್ದಾರೆ.

  ಆಗಸ್ಟ್ 15ರಂದು ಎಂ.ಎಸ್. ಧೋನಿ ಅವರೊಂದಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ ರೈನಾ ಅವರು ಇದೀಗ ತಾನು ತವರಿಗೆ ವಾಪಸಾಗಲು ತನ್ನ ದೀರ್ಘಕಾಲದ ಫ್ರಾಂಚೈಸಿ ನಡುವಿನ ಬಿರುಕು ಕಾರಣ ಎಂಬ ವರದಿಗಳನ್ನು ಅಲ್ಲಗಳೆದಿದ್ದಾರೆ ಚೆನ್ನೈ ತಂಡದ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೊರೋನ ವೈರಸ್ ಸೋಂಕು ತಗಲಿರುವುದು ದೃಢಪಟ್ಟಿದೆ. ಇದೇ ಸಂದರ್ಭದಲ್ಲಿ ರೈನಾ ತವರಿಗೆ ವಾಪಸಾಗಿದ್ದರು.

‘‘ಇದು ವೈಯಕ್ತಿಕ ನಿರ್ಧಾರ ಮತ್ತು ನನ್ನ ಕುಟುಂಬಕ್ಕಾಗಿ ನಾನು ಹಿಂದಿರುಗಬೇಕಾಗಿತ್ತು. ಮನೆಯ ಕಡೆಗೆ ತಕ್ಷಣವೇ ಗಮನಹರಿಸಬೇಕಾದ ಅಗತ್ಯ ಇದೆೆ. ಸಿಎಸ್ಕೆ ನನ್ನ ಕುಟುಂಬವೂ ಹೌದು ಮತ್ತು ಮಹಿ ಭಾಯ್ (ಎಂ.ಎಸ್.ಧೋನಿ) ಕೂಡ ನನಗೆ ಬಹಳ ಮುಖ್ಯ. ಆದರೆ ಇದು ಕಠಿಣ ನಿರ್ಧಾರ ’’ ಎಂದು ರೈನಾ ತಿಳಿಸಿದರು.

   ‘‘ಸಿಎಸ್‌ಕೆಯಲ್ಲಿ ಮುಂದುವರಿಯುವ ವಿಚಾರದ ಬಗ್ಗೆ ಕೇಳಿದಾಗ ‘‘ಚೆನ್ನೈ ಸೂಪರ್ ಕಿಂಗ್ಸ್ ಮತ್ತು ನನ್ನ ನಡುವೆ ಯಾವುದೇ ಸಮಸ್ಯೆ ಇಲ್ಲ. ಯಾರೂ ಕೂಡ 12.5 ಕೋಟಿ ರೂ.ಬಿಡಲು ತಯಾರಿ ರಲಾರರು ಮತ್ತು ದೃಢವಾದ ಕಾರಣವಿಲ್ಲದೆ ಹೊರ ನಡೆಯುವುದಿಲ್ಲ. ನಾನು ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಹೊಂದಿರಬಹುದು. ಆದರೆ ನಾನು ಇನ್ನೂ ಯುವಕ ಮತ್ತು ತಂಡದಲ್ಲಿ ಆಡಲು ಎದುರು ನೋಡುತ್ತಿದ್ದೇನೆ. ಮುಂದೆ 4ರಿಂದ 5 ವರ್ಷಗಳ ಕಾಲ ಐಪಿಎಲ್‌ನಲ್ಲಿ ತಾನು ಆಡುವುದಾಗಿ ರೈನಾ ಹೇಳಿದ್ದಾರೆ.

   ಸಿಎಸ್‌ಕೆಯಲ್ಲಿ ಅವರ ಭವಿಷ್ಯದ ಬಗ್ಗೆ ಕೇಳಿದಾಗ ಮತ್ತೆ ದುಬೈನಲ್ಲಿ ತಂಡವನ್ನು ಸೇರುವ ಸುಳಿವು ನೀಡಿದ್ದಾರೆ. ಕ್ವಾರಂಟೈನ್‌ನಲ್ಲಿ ಇದ್ದಾಗಲೂ ತಾನು ಅಭ್ಯಾಸವನ್ನು ಮುಂದುವರಿಸಿರುವುದಾಗಿ ತಿಳಿಸಿದ ರೈನಾ ಅಲ್ಲಿನ ಶಿಬಿರದಲ್ಲಿ ನೀವು ನನ್ನನ್ನು ಮತ್ತೆ ನೋಡಬಹುದೆಂದು ವಿಶ್ವಾಸ ವ್ಯಕ್ತಪಡಿಸಿದರು.

ಐಪಿಎಲ್‌ಗಾಗಿ ರಚಿಸಲಾದ ಕಟ್ಟುನಿಟ್ಟಾದ ಜೈವಿಕ ಸುರಕ್ಷಿತ ವಾತಾವರಣದಲ್ಲಿ ತಾನು ಸುರಕ್ಷಿತವಾಗಿಲ್ಲ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ರೈನಾ‘‘ ನಾನು ಯುವ ಕುಟುಂಬವನ್ನು ಹೊಂದಿದ್ದೇನೆ ಮತ್ತು ನನಗೆ ಏನಾದರೂ ಸಂಭವಿಸಿದಲ್ಲಿ.ಅವರ ಸ್ಥಿತಿ ಏನಾಗಬಹುದು? ಎಂದು ಪ್ರಶ್ನಿಸಿದರು.

 ‘‘ನನ್ನ ಕುಟುಂಬವು ನನಗೆ ಅತ್ಯಂತ ಮುಖ್ಯವಾಗಿದೆ ಮತ್ತು ಈ ಸಮಯದಲ್ಲಿ ನಾನು ಅವರ ಬಗ್ಗೆ ನಿಜವಾಗಿಯೂ ಕಾಳಜಿ ವಹಿಸುತ್ತೇನೆ’’ಎಂದು ರೈನಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News