ಅಂಬಾತನಯ ಮುದ್ರಾಡಿಗೆ ಪಾರ್ತಿಸುಬ್ಬ ಪ್ರಶಸ್ತಿ, ಡಾ. ಚಂದ್ರಶೇಖರ್ ದಾಮ್ಲೆ ಸೇರಿ ಐವರು ಗೌರವ ಪ್ರಶಸ್ತಿಗೆ ಆಯ್ಕೆ
ಬೆಂಗಳೂರು, ಸೆ.4: ಕರ್ನಾಟಕ ಯಕ್ಷಗಾನ ಅಕಾಡಮಿಯ 2019ನೇ ಸಾಲಿನ ಪಾರ್ತಿಸುಬ್ಬ ಪ್ರಶಸ್ತಿಗೆ ಉಡುಪಿಯ ಹಿರಿಯ ಯಕ್ಷಗಾನ ಕವಿ ಅಂಬಾತನಯ ಮುದ್ರಾಡಿ ಆಯ್ಕೆಯಾಗಿದ್ದಾರೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಯಕ್ಷಗಾನ ವಿದ್ವಾಂಸ ಡಾ. ಚಂದ್ರಶೇಖರ್ ದಾಮ್ಲೆ ಸೇರಿ 5 ಮಂದಿಗೆ ವಾರ್ಷಿಕ ಪ್ರಶಸ್ತಿ, 10 ಮಂದಿಗೆ ಯಕ್ಷಸಿರಿ ಪ್ರಶಸ್ತಿ ಹಾಗೂ 3 ಮಂದಿ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದ್ದಾರೆ.
2019ನೇ ಸಾಲಿನ ಯಕ್ಷಗಾನ ಅಕಾಡಮಿಯ ಗೌರವ ಪ್ರಶಸ್ತಿ ಆಯ್ಕೆಯಾದವರು
ದಕ್ಷಿಣ ಕನ್ನಡ ಜಿಲ್ಲೆಯ ಡಾ. ಚಂದ್ರಶೇಖರ್ ದಾಮ್ಲೆ (ಯಕ್ಷಗಾನ ವಿದ್ವಾಂಸರು), ಬೆಂಗಳೂರಿನ ಡಾ. ಆನಂದರಾಮ ಉಪಾಧ್ಯ(ಯಕ್ಷಗಾನ ವಿದ್ವಾಂಸ), ಉತ್ತರ ಕನ್ನಡ ಜಿಲ್ಲೆಯ ಡಾ.ರಾಮಕೃಷ್ಣ ಗುಂದಿ(ಯಕ್ಷಗಾನ ಕಲಾವಿದರು), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆ.ಸಿ.ನಾರಾಯಣ (ಮೂಡಲಪಾಯ ಯಕ್ಷಗಾನ ಕಲಾವಿದರು), ಹಾಸನ ಜಿಲ್ಲೆಯ ಡಾ.ಚಂದ್ರು ಕಾಳೇನಹಳ್ಳಿ (ಮೂಡಲಪಾಯ ಯಕ್ಷಗಾನ ತಜ್ಞರು).
2019ನೇ ಸಾಲಿನ ಯಕ್ಷಸಿರಿ ವಾರ್ಷಿಕ ಪ್ರಶಸ್ತಿಗೆ ಆಯ್ಕೆಯಾದವರು
ಚಿಕ್ಕಮಗಳೂರಿನ ನಲ್ಲೂರು ಜನಾರ್ದನ ಆಚಾರ್(ಯಕ್ಷಗಾನ ಮದ್ದಲೆ ವಾದಕರು), ಧರ್ಮಸ್ಥಳದ ಉಬರಡ್ಕ ಉಮೇಶ ಶೆಟ್ಟಿ (ಯಕ್ಷಗಾನ ಗುರುಗಳು ಹಾಗೂ ವೇಷಧಾರಿ), ಕಾಸರಗೋಡಿನ ಕುರಿಯ ಗಣಪತಿ ಶಾಸ್ತ್ರಿ (ಯಕ್ಷಗಾನದ ಹಿರಿಯ ಭಾಗವತರು), ಕುಂದಾಪುರದ ಆರ್ಗೋಡು ಮೋಹನದಾಸ್ ಶೆಣೈ (ಯಕ್ಷಗಾನ ಕಲಾವಿದರು), ಕುಂದಾಪುರದ ಮುಹಮ್ಮದ್ ಗೌಸ್ (ಯಕ್ಷಗಾನ ಕಲಾವಿದರು, ಸಂಘಟಕರು), ಮೂರೂರು ರಾಮಚಂದ್ರ ಹೆಗಡೆ (ಪ್ರಸಾಧನ), ಎಂ.ಎನ್.ಹೆಗಡೆ ಹಳವಳ್ಳಿ(ಯಕ್ಷಗಾನ ತಾಳಮದ್ದಳೆ ಮತ್ತು ಅರ್ಥಧಾರಿಗಳು), ಉಡುಪಿಯ ಹಾರಾಡಿ ಸರ್ವೋತ್ತಮ ಗಾಣಿಗ (ಯಕ್ಷಗಾನ ವೇಧಾರಿಗಳು), ತುಮಕೂರಿನ ಬಿ.ರಾಜಣ್ಣ(ಮೂಡಲಪಾಯ ಯಕ್ಷಗಾನ), ತುಮಕೂರಿನ ಎ.ಜಿ.ಅಶ್ವತ್ಥ ನಾರಾಯಣ (ಮೂಡಲಪಾಯ ಯಕ್ಷಗಾನ).
2019ನೇ ಸಾಲಿನ ಪುಸ್ತಕ ಬಹುಮಾನಕ್ಕೆ ಆಯ್ಕೆಯಾದವರು
ಉತ್ತರ ಕನ್ನಡ ಜಿಲ್ಲೆಯ ಹೊಸ್ತೋಟ ಮಂಜುನಾಥ ಭಾಗವತ (ಯಕ್ಷಗಾನ ವೀರಾಂಜನೇಯ ವೈಭವ), ಮಂಗಳೂರಿನ ಕೃಷ್ಣ ಪ್ರಕಾಶ ಉಳಿತ್ತಾಯ (ಅಗರಿ ಮಾರ್ಗ), ಚಿತ್ರದುರ್ಗದ ಡಾ. ಚಿಕ್ಕಣ್ಣ ಯಣ್ಣೆಕಟ್ಟೆ (ಬಯಲಾಟ ಒಂದು ಅಧ್ಯಾಯನ).