ಜನಾಂಗೀಯ ಅನ್ಯಾಯದ ವಿರುದ್ಧ ಮಾಸ್ಕ್ ಧರಿಸಿದ ಒಸಾಕಾ

Update: 2020-09-05 18:35 GMT

ನ್ಯೂಯಾರ್ಕ್: ಅಮೆರಿಕದಲ್ಲಿ ಕಪ್ಪು ವರ್ಣೀಯರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವಿರೋಧಿಸಿ ಈ ವರ್ಷ ಯುಎಸ್ ಓಪನ್ ಪಂದ್ಯಾವಳಿಯಲ್ಲಿ ಮಾಜಿ ಚಾಂಪಿಯನ್ ನವೊಮಿ ಒಸಾಕಾ ತನ್ನ ಪ್ರತಿಯೊಂದು ಪಂದ್ಯಗಳಲ್ಲೂ ವಿಭಿನ್ನ ಫೇಸ್ ಮಾಸ್ಕ್ ಧರಿಸಿದ್ದಾರೆ.

 ಒಸಾಕಾ ಅವರು ಜನಾಂಗೀಯ ದ್ವೇಷಕ್ಕೆ ಬಲಿಯಾದವರ ಹೆಸರು ಹೊಂದಿರುವ ಮಾಸ್ಕ್ ಧರಿಸಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.

 ಮೊದಲ ಸುತ್ತು: ಬ್ರಿಯೊನ್ನಾ ಟೇಲರ್ (26) ಮಾರ್ಚ್ 13ರಂದು ಕೆಂಟುಕಿಯ ಲೂಯಿಸ್‌ವಿಲ್ಲೆಯಲ್ಲಿರುವ ತನ್ನ ಅಪಾರ್ಟ್ ಮೆಂಟ್‌ನಲ್ಲಿ ಪೊಲೀಸರು ಗುಂಡಿಕ್ಕಿ ಕೊಂದರು. ಇದರಲ್ಲಿ ಭಾಗಿಯಾಗಿದ್ದ ಓರ್ವ ಪೊಲೀಸ್ ಅಧಿಕಾರಿಯನ್ನು ಜೂನ್‌ನಲ್ಲಿ ನಗರದ ಪೊಲೀಸ್ ಇಲಾಖೆಯಿಂದ ವಜಾ ಮಾಡಲಾಯಿತು. ತಂಡದಲ್ಲಿದ್ದ ಮೂರು ಮಂದಿ ಪೊಲೀಸರ ಮೇಲೆ ಯಾವುದೇ ಕ್ರಿಮಿನಲ್ ಆರೋಪಗಳನ್ನು ದಾಖಲಿಸಲಾಗಿಲ್ಲ.

   ಎರಡನೇ ಸುತ್ತು: ಕರಿಯ ಜನಾಂಗಕ್ಕೆ ಸೇರಿದ 23ರ ಹರೆಯದ ಎಲಿಜಾ ಮೆಕ್ಲಿನ್ ಕಳೆದ ವರ್ಷ ಆಗಸ್ಟ್‌ನಲ್ಲಿ ಕೊಲೊರಾಡೋದ ಅರೋರಾದಲ್ಲಿ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಅವರ ಹೆಸರಿರುವ ಮಾಸ್ಕ್‌ನ್ನು ಒಸಾಕಾ ಧರಿಸಿದ್ದರು.

   25 ವರ್ಷದ ಅಹ್ಮದ್ ಆರ್ಬೆರಿ ಅವರನ್ನು ಫೆಬ್ರವರಿಯಲ್ಲಿ ಜಾರ್ಜಿಯಾದ ಉಪನಗರದಲ್ಲಿ ಶಸ್ತ್ರಸಜ್ಜಿತ ಬಿಳಿಯರ ಗುಂಪು ಹಿಂಬಾಲಿಸಿಕೊಂಡು ಹೋಗಿ ಗುಂಡಿಟ್ಟು ಹತ್ಯೆ ಮಾಡಿತ್ತು. ರಾಷ್ಟ್ರ ಮಟ್ಟದಲ್ಲಿ ಆಕ್ರೋಶಕ್ಕೆ ಕಾರಣವಾದ ಆರ್ಬೆರಿ ಹತ್ಯೆ ಪ್ರಕರಣದಲ್ಲಿ ಮೂವರು ಬಿಳಿಯರ ವಿರುದ್ಧ ಆರೋಪ ಹೊರಿಸಲಾಗಿದೆ. ಅಹ್ಮದ್ ಆರ್ಬೆರಿ ಹೆಸರು ಇರುವ ಮಾಸ್ಕ್ ಧರಿಸಿ ಒಸಾಕಾ ಆಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News