ಕಮಲಾ ಹ್ಯಾರಿಸ್ ಅಧ್ಯಕ್ಷೆಯಾದರೆ ಅಮೆರಿಕಕ್ಕೆ ಅವಮಾನ: ಟ್ರಂಪ್

Update: 2020-09-09 14:56 GMT

ನಾರ್ತ್ ಕ್ಯಾರಲೈನ (ಅವೆುರಿಕ), ಸೆ. 9: ಅವೆುರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿಯಾಗಿರುವ ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿ ನಡೆಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ‘‘ಅವರನ್ನು ಜನರು ಇಷ್ಟಪಡುವುದಿಲ್ಲ ಹಾಗೂ ಅವರು ದೇಶದ ಅಧ್ಯಕ್ಷೆಯಾದರೆ ಅದು ಅಮೆರಿಕಕ್ಕೆ ಅವಮಾನವಾಗಿರುತ್ತದೆ’’ ಎಂದು ಹೇಳಿದ್ದಾರೆ.

‘‘ಇದನ್ನು ನೆನಪಿಡುವುದು ತುಂಬಾ ಸುಲಭ- ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಈ ಚುನಾವಣೆಯಲ್ಲಿ ವಿಜಯಿಯಾದರೆ ಚೀನಾ ಗೆದ್ದಂತೆ. ಇದು ಅಷ್ಟು ಸರಳ. ಇತಿಹಾಸದಲ್ಲೇ ಅತ್ಯುತ್ತಮ ಆರ್ಥಿಕತೆಯನ್ನು ನಾವು ನಿರ್ಮಿಸಿದೆವು. ಚೀನಾದ ಸಾಂಕ್ರಾಮಿಕ ಬಂದು ಅದನ್ನು ಹಾಳು ಮಾಡಿತು. ಈಗ ನಾವು ಆರ್ಥಿಕತೆಯನ್ನು ಮತ್ತೆ ಆರಂಭಿಸಿದ್ದೇವೆ’’ ಎಂದು ನಾರ್ತ್ ಕ್ಯಾರಲೈನದಲ್ಲಿ ಚುನಾವಣಾ ಸಭೆಯೊಂದನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್ ಹೇಳಿದರು.

‘‘ಕಮಲಾ ಹ್ಯಾರಿಸ್‌ರನ್ನು ಜನರು ಇಷ್ಟಪಡುವುದಿಲ್ಲ. ಅವರನ್ನು ಯಾರೂ ಇಷ್ಟಪಡುವುದಿಲ್ಲ. ಅವರು ಯಾವತ್ತೂ ಅವೆುರಿಕದ ಮೊದಲ ಮಹಿಳಾ ಅಧ್ಯಕ್ಷರಾಗಲು ಸಾಧ್ಯವಿಲ್ಲ. ಹಾಗೆ ಆದರೆ ಅದು ಅವೆುರಿಕಕ್ಕೆ ಅವಮಾನ ಆದಂತೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News