×
Ad

ನಿಖಿಲ್ ಗುಪ್ತಾ ಅಮೆರಿಕಕ್ಕೆ ಹಸ್ತಾಂತರಕ್ಕೆ ಝೆಕ್ ಕೋರ್ಟ್ ತಡೆ

Update: 2024-05-07 22:45 IST

ಸಾಂದರ್ಭಿಕ ಚಿತ್ರ

ಪ್ರೇಗ್: ಖಾಲಿಸ್ತಾನ್ ಮುಖಂಡ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆಗೆ ಸಂಚು ಪ್ರಕರಣದ ಆರೋಪಿ ನಿಖಿಲ್ ಗುಪ್ತಾನನ್ನು ಅಮೆರಿಕಕ್ಕೆ ಹಸ್ತಾಂತರಿಸುವ ಕೆಳ ನ್ಯಾಯಾಲಯದ ಆದೇಶಕ್ಕೆ ಝೆಕ್ ಗಣರಾಜ್ಯದ ಉನ್ನತ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಹಸ್ತಾಂತರ ಪ್ರಕ್ರಿಯೆ ವಿಳಂಬಗೊಂಡರೆ ಸಾರ್ವಜನಿಕ ಹಿತಾಸಕ್ತಿಗೆ ಗಮನಾರ್ಹ ಹಾನಿಯಾಗುವುದಿಲ್ಲ. ಗುಪ್ತಾರನ್ನು ಕ್ರಿಮಿನಲ್ ಮೊಕದ್ದಮೆಗಾಗಿ ಅಮೆರಿಕಕ್ಕೆ ಹಸ್ತಾಂತರಿಸುವುದರಿಂದ ಬೇರೆಯವರಿಗಿಂತ ಅವರಿಗೇ (ಗುಪ್ತಾಗೆ) ಹೆಚ್ಚಿನ ಹಾನಿಯಾಗಲಿದೆ ಎಂದು ಪ್ರೇಗ್‍ನ ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧಿಕಾರಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News